Asianet Suvarna News Asianet Suvarna News

ಧನೋವಾ ಮುನ್ನಡೆಸಿದ್ದ ಗೋಲ್ಡನ್‌ ಆ್ಯರೋಸ್‌ಗೆ ರಫೇಲ್‌ ವಿಮಾನ ಹೊಣೆ!

ಧನೋವಾ ಮುನ್ನಡೆಸಿದ್ದ ಗೋಲ್ಡನ್‌ ಆ್ಯರೋಸ್‌ಗೆ ರಫೇಲ್‌ ವಿಮಾನ ಹೊಣೆ|  1999ರ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ 17 ಸ್ಕ್ವಾಡ್ರನ್‌ ಕಮಾಂಡರ್‌ ಆಗಿದ್ದ  ಧನೋವಾ

IAF Golden Arrows Squadron led by Air Chief Dhanoa during Kargil war to be resurrected for Rafale
Author
Bangalore, First Published Sep 11, 2019, 10:17 AM IST

ಅಂಬಾಲಾ[ಸೆ.11]: ಫ್ರಾನ್ಸ್‌ನಿಂದ ಖರೀದಿಸಲಾಗುತ್ತಿರುವ ರಫೇಲ್‌ ಯುದ್ಧ ವಿಮಾನವನ್ನು ಅಂಬಾಲಾದಲ್ಲಿರುವ ವಾಯು ನೆಲೆಯಲ್ಲಿ ಇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂಬಾಲಾ ವಾಯು ನೆಲೆಯಲ್ಲಿ ‘ಗೋಲ್ಡನ್‌ ಆ್ಯರೋಸ್‌’ 17 ಸ್ಕಾ$್ವರ್ಡನ್‌ ಅನ್ನು ವಾಯು ಪಡೆದ ಮುಖ್ಯಸ್ಥ ಬಿ.ಎಸ್‌. ಧನೋವಾ ಮಂಗಳವಾರ ಮರುಸ್ಥಾಪಿಸಿದ್ದಾರೆ.

1999ರ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಧನೋವಾ 17 ಸ್ಕಾ$್ವರ್ಡನ್‌ ಕಮಾಂಡರ್‌ ಆಗಿದ್ದರು. ಈ ವೇಳೆ ವಾಯು ಪಡೆ ಸಿಬ್ಬಂದಿ ಉದ್ದೇಶಿಸಿ ಮಾತನಾಡಿದ ಧನೋವಾ, ಸ್ಥಾಪನೆ ಆದಾಗಿನಿಂದಲೂ ಅಂಬಾಲಾ ಸ್ಕ್ವಾಡ್ರನ್‌ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜಾಗ್ವಾರ್‌ ಮತ್ತು ಮಿಗ್‌-21 ವಿಮಾನವನ್ನು ಸ್ವೀಕರಿಸಿದ ಬಳಿಕ ಅಂಬಾಲಾ ವಾಯು ನೆಲೆ ರಫೇಲ್‌ ಯುದ್ಧ ವಿಮಾನವನ್ನು ಬರಮಾಡಿಕೊಳ್ಳಲು ಸಜ್ಜಾಗುತ್ತಿದೆ ಎಂದು ಹೇಳಿದ್ದಾರೆ.

ರಫೇಲ್‌ ವಿಮಾನ ಹಾರಿಸಿದ ಮೊದಲ ಘಟಕ ಎಂಬ ಹೆಗ್ಗಳಿಕೆಗೆ 17 ಸ್ಕಾ$್ವರ್ಡನ್‌ ಪಾತ್ರವಾಗಲಿದೆ.

Follow Us:
Download App:
  • android
  • ios