ನವದೆಹಲಿ : ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಗಡಿ ರೇಖೆಯನ್ನು ದಾಟಿ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದೆ. 

1000 ಕೆಜಿ ಬಾಂಬ್ ದಾಳಿಯ ಮೂಲಕ ಉಗ್ರರ ಉಡೀಸ್ ಮಾಡಲಾಗಿದೆ. ಈ ಬಗ್ಗೆ ಭಾರತದಾದ್ಯಂತ ಭಾರತೀಯ ಸೇನೆಯ ಈ ಕಾರ್ಯಕ್ಕೆ ಬೆಂಬಲ ವ್ಯಕ್ತವಾಗಿದೆ. 

ಹಲವು ರಾಜಕೀಯ ಮುಖಂಡರು IAF ನಡೆಸಿದ ಕಾರ್ಯಾಚರಣೆಗೆ ಸೆಲ್ಯೂಟ್ ಮಾಡಿದ್ದಾರೆ. 

ಸಿಎಂ ಎಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಭಾರತೀಯ ವಾಯುಪಡೆಗೆ ನನ್ನದೊಂದು ಸೆಲ್ಯೂಟ್ ಎಂದಿದ್ದಾರೆ. 

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸುರೇಶ್ ಕುಮಾರ್ ಸೇರಿದಂತೆ ಹಲವು ಮುಖಂಡರು ಸೇನೆಯ ಕಾರ್ಯಕ್ಕೆ ಅಭಿನಂದಿಸಿದ್ದಾರೆ. 

ಇನ್ನು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಟ್ವೀಟ್ ಮಾಡಿ ಈ ದಾಳಿಗೂ ಕೂಡ ಸಾಕ್ಷಿ ಆಧಾರ, ಪ್ರೂಫ್ ಕೇಳುವುದಿಲ್ಲವೆಂದು ವಿಶ್ವಾಸ ಇಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ.