ಮಂಡ್ಯ, [ನ.01]: ತಮಗೆ ಗೌಡ ಎಂದು ಹೆಸರಿ್ಟ್ಟಿದ್ದಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ದುರಾದೃಷ್ಟ, ನಮ್ಮ ಅಪ್ಪ-ಅಮ್ಮ ನನಗೆ ಗೌಡ ಎಂಬ ಹೆಸರಿಟ್ಟಿದ್ದೆ ತಪ್ಪಾಗಿದೆ ಎಂದು ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡ‌ ಹೇಳಿದ್ದಾರೆ.

ನಾಗಮಂಗಲದಲ್ಲಿ  ಇಂದು [ಗುರುವಾರ] ಆಯೋಜಿಸಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ದೇವೇಗೌಡ್ರು, ನನ್ನ ಅಪ್ಪ-ಅಮ್ಮ ನನಗೆ ಗೌಡ ಎಂದು ಹೆಸರಿಟ್ಟಿದ್ದೇ ತಪ್ಪಾಯಿತೇ, ನಾನು ಎಲ್ಲ ಸಮುದಾಯಗಳ ಏಳಿಗೆಗೆ ಶ್ರಮಿಸಿದ್ದೇನೆ ಆದರೆ ಒಕ್ಕಲಿಗ ಸಮುದಾಯದವನು ಎಂದೇ ನನ್ನನ್ನು ಗುರುತಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅನೇಕ ಹಿಂದುಳಿದ, ದಲಿತ ಮಹಿಳೆಯರನ್ನು ಅಧಿಕಾರಕ್ಕೆ ಏರಿಸಿದ್ದೇವೆ ಆದರೂ ಸಹ ಒಂದು ಸಮುದಾಯದ ಮುಖಂಡನಾಗಿ ಮಾತ್ರವೇ ಗುರುತಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.