ಒಂದು ವೇಳೆ ತಮ್ಮ ಬೇಡಿಕೆ ಈಡೇರದೇ ಹೋದಲ್ಲಿ 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿಯನ್ನು ತೊರೆಯುವುದಾಗಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಕಾನ್ಪುರ: ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗದಿದ್ದಲ್ಲಿ ಪಕ್ಷಕ್ಕೆ ವಿದಾಯ ಹೇಳು ವುದಾಗಿ ಉತ್ತರಪ್ರದೇಶದ ಉನ್ನಾವ್ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಬೆದರಿಕೆ ಹಾಕಿದ್ದಾರೆ.
ಬಿಜೆಪಿಯ ಇಂದಿನ ಉತ್ತುಂಗದ ಸ್ಥಿತಿಗೆ ಶ್ರೀರಾಮನ ಆಶೀರ್ವಾದ ಮತ್ತು ರಾಮ ಮಂದಿರ ನಿರ್ಮಾಣ ಆಂದೋಲನವೇ ಕಾರಣ.
ಹೀಗಾಗಿ ರಾಮಮಂದಿರ ನಿರ್ಮಾಣಕ್ಕೆ ಪಣ ತೊಟ್ಟ ಎಲ್ಲಾ ಸಾಧುಸಂತರಿಗೆ ನನ್ನ ಬೆಂಬಲವಿದೆ. 2019 ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮಂದಿರ ನಿರ್ಮಾಣಕ್ಕೆ ಮುಂದಾಗದಿದ್ದ ಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುವೆ ಎಂದಿದ್ದಾರೆ.
