ಬೆಂಗಳೂರು :  ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಲ್ ಭೇಟಿ ಬಳಿಕ ಶಾಸಕ ಶಾಸಕ ಅಜಯ್ ಸಿಂಗ್ ಅವರು ತಾವು ಕೂಡ  ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. 

ಈ ಬಗ್ಗೆ ವೇಣುಗೋಪಾಲ್ ಬಳಿ ಚರ್ಚೆ ಮಾಡಿ ಬೇಡಿಕೆ ಇಟ್ಟಿದ್ದೇನೆ ಎಂದು ಮಾಜಿ ಸಿಎಂ ದಿವಂಗತ ಧರ್ಮಸಿಂಗ್ ಅವರ ಪುತ್ರ ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. 

ಇನ್ನು  ಸಮ್ಮಿಶ್ರ ಸರ್ಕಾರ ಅಂದ ಮೇಲೆ ಸಂಕಷ್ಟಗಳು ಸಹಜವಾಗಿರುತ್ತವೆ.  ಆದರೆ ನಮ್ಮ ಶಾಸಕರು ಯಾರೂ ಬಿಜೆಪಿಯ ಆಮಿಷ ಗಳಿಗೆ ಬಲಿಯಾಗುವುದಿಲ್ಲ.  ನನ್ನನ್ನು ಬಿಜೆಪಿಯವರು ಸಂಪರ್ಕ ಮಾಡಿಲ್ಲ.

ನಮ್ಮ ತಂದೆ ಧರಂ ಸಿಂಗ್ 50 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದವರು ನಾನು ಇನ್ನೂ 50 ವರ್ಷವಾದರೂ ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ ಎಂದು ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.