ತ್ತೀಚೆಗೆ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ ಪುತ್ರಿಯ ನೆರವಿಗೆ ಕ್ರಿಕೆಟಿಗ ಗೌತಮ್ ಗಂಭೀರ್ ಧಾವಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್’ನಲ್ಲಿ ನಡೆದ ದಾಳಿಯಲ್ಲಿ ಏಎಸ್ಐ ಅಬ್ದುಲ್ ರಶೀದ್ ಶಾ ಹುತಾತ್ಮರಾಗಿದ್ದರು. ತಂದೆಯ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಝೊಹ್ರಾ ಅಳುತ್ತಿರುವ ಫೋಟೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತಲ್ಲದೇ, ನೋಡುಗರ ಹೃದಯವನ್ನು ಕರಗಿಸುವಂತಿತ್ತು.
ನವದೆಹಲಿ: ಇತ್ತೀಚೆಗೆ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ ಪುತ್ರಿಯ ನೆರವಿಗೆ ಕ್ರಿಕೆಟಿಗ ಗೌತಮ್ ಗಂಭೀರ್ ಧಾವಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್’ನಲ್ಲಿ ನಡೆದ ದಾಳಿಯಲ್ಲಿ ಏಎಸ್ಐ ಅಬ್ದುಲ್ ರಶೀದ್ ಶಾ ಹುತಾತ್ಮರಾಗಿದ್ದರು. ತಂದೆಯ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಝೊಹ್ರಾ ಅಳುತ್ತಿರುವ ಫೋಟೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತಲ್ಲದೇ, ನೋಡುಗರ ಹೃದಯವನ್ನು ಕರಗಿಸುವಂತಿತ್ತು.
ಟ್ವೀಟರ್’ನಲ್ಲಿ ಭಾವಾನಾತ್ಮಕ ಸಂದೇಶವನ್ನು ಹಾಕುವ ಮೂಲಕ ಗೌತಮ್ ಗಂಭೀರ್, ಅವರ ಮಗಳು ಝೊಹ್ರಾಳ ನೆರವಿಗೆ ಧಾವಿಸಿದ್ದಾರೆ.
‘ಝೊಹ್ರಾ, ಲಾಲಿ ಹಾಡಿ ನಿನ್ನನ್ನು ಮಲಗಿಸಲು ನನ್ನಿಂದ ಸಾಧ್ಯವಿಲ್ಲ, ಆದರೆ ನಿನ್ನ ಕನಸುಗಳನ್ನು ನನಸಾಗಿಸುವತ್ತ ನಾನು ಸಹಕಾರ ನೀಡಬಲ್ಲೆ. ಜೀವನಾದ್ಯಂತ ನಿನ್ನ ಶಿಕ್ಷಣದ ಖರ್ಚನನ್ಉ ನಾನು ಭರಿಸುವೆ’ ಎಂದು ಗಂಭೀರ್ ಟ್ವೀಟಿಸಿದ್ದಾರೆ.
ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯು ಕೂಡಾ ಹುತಾತ್ಮ ಸಿಬ್ಬಂದಿಯ ಕುಟುಂಬದವರ ಶ್ರೇಯೋಭಿವೃದ್ಧಿಗೆ ನೆರವು ನೀಡುವಂತೆ ಮನವಿಮಾಡಿಕೊಂಡಿತ್ತು.
ಹುತಾತ್ಮ ಭದ್ರತಾ ಸಿಬ್ಬಂದಿಗಳ ಕುಟುಂಬದವರ ನೆರವಿಗೆ ಗಂಭೀರ್ ಧಾವಿಸುತ್ತಿರುವುದ ಇದು ಮೊದಲ ಬಾರಿಯಲ್ಲ. ಈ ಹಿಂದೆ ಸುಕ್ಲಾದಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ 25 ಸಿಆರ್’ಪಿಎಫ್ ಸಿಬ್ಬಂದಿಗಳ ಮಕ್ಕಳ ನೆರವಿಗೂ ಗಂಭೀರ್ ಧಾವಿಸಿದ್ದರು.
ಗೌತಮ್ ಗಂಭೀರ್ ಪ್ರತಿಷ್ಠಾನವು ಹುತಾತ್ಮರ ಮಕ್ಕಳ ಶಿಕ್ಷಣದ ಖರ್ಚನ್ನು ಭರಿಸುವುದಾಗಿ ಗಂಭೀರ್ ಹೇಳಿದ್ದಾರೆ.
