‘ದೇವಿ ಪರೀಕ್ಷೆ ಮುಗಿದ ಮೇಲೆ ಸಚಿವನಾಗ್ತೇನೆ, ಆಮೇಲೆ ಸಿಎಂ ಆಗ್ತೇನೆ’

First Published 13, Jul 2018, 8:04 PM IST
I want to become Chief Minister one day: MB Patil
Highlights

ಬಂಡಾಯದ ಬಾವುಟ ಹಾರಿಸಿದ್ದ ಎಂಬಿ ಪಾಟೀಲ್ ಈಗ ತಮ್ಮ ಹುಟ್ಟೂರಿನ ಜಾತ್ರೆಯೊಂದಲ್ಲಿ ಗುಡುಗಿದ್ದಾರೆ. ಯಾರು ಏನೇ ಅಂದ್ರೂ ನಾನೇ ಫವರ್ ಫುಲ್ ಎಂದಿದ್ದಾರೆ.

ವಿಜಯಪುರ[ಜು.13]  ನಾನು ಹೇಗೆ ಇದ್ರು "ಪವರ್ ಪುಲ್" ಎಂದು ಮಾಜಿ ನೀರಾವರಿ ಸಚಿವ ಹಾಲಿ ಶಾಸಕ ಎಂ ಬಿ ಪಾಟೀಲ್ ಹೇಳಿದ್ದಾರೆ.

ವಿಜಯಪುರ ತಾಲ್ಲೂಕಿನ ಸೋ ಮದೇವರಹಟ್ಟಿ ಗ್ರಾಮದ ದು ಗ್ರಾ ದೇವಿ ಜಾತ್ರೆ ಕಾರ್ಯಕ್ರಮದಲ್ಲಿ  ಮಾತನಾಡಿದ ಎಂ ಬಿ ಪಾಟೀಲ್ , ನಾನೇ ಪವರ್ ಪುಲ್ , ನಾನು ಸಚಿವನಿದ್ದಾಗಲೂ ನಾನೇ ಪವರ್ ಫುಲ್ ಆಗಿದ್ದವನು ಎಂದು ಹೇಳಿದರು.

ಕಳೆದ ವರ್ಷದ ಇದೇ ಜಾತ್ರೆಯಲ್ಲಿ ಸಿಎಂ ಆಗ್ತೆನೆ ಎಂದು ಹೇಳಿದ್ರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ನನಗೀನ್ನು 54 ವರ್ಷ. ಇನ್ನು ಅದಕ್ಕೆ ಟೈ ಇದೆ. ಆ ಟೈಂ ಬರ್ತದೆ ಎಂದು ಹೇಳುವ ಮೂಲಕ ಸಿಎಂ ರೇಸ್ ನಲ್ಲಿ ಮುಂದೆಯೂ ನಾನಿದ್ದೇನೆ ಎಂದು ಸ್ಪಷ್ಟಪಡಿಸಿದರು.ಇನ್ನು ಸಚಿವ ಸ್ಥಾನ ಸಿಗುವ ಬಗ್ಗೆ ಸುಳಿವು ಬಿಚ್ಚಿಟ್ಟ ಎಂಬಿಪಿ, ದುರ್ಗಾದೇವಿ ಆಶೀರ್ವಾದ ನನ್ನ ಮೇಲಿದೆ. ದೇವಿ ಸಧ್ಯ ನನ್ನ ಪರೀಕ್ಷೆ ನಡೆಸಿದ್ದಾಳೆ. ಪರೀಕ್ಷೆಯಲ್ಲಿ ದೇವಿ ನನ್ನನ್ನು ಪಾರು ಮಾಡಿಸುತ್ತಾಳೆಂಬ ವಿಶ್ವಾಸವಿದೆ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಆಕಾಂಕ್ಷೆಯನ್ನು ಪರೋಕ್ಷವಾಗಿ ಎಂ ಬಿ ಪಾಟೀಲ್ ವ್ಯಕ್ತಪಡಿಸಿದರು.

loader