ಬೆಂಗಳೂರು[ಜು.12]:  ರಾಜ್ಯ ಮುಂಗಾರು ಅಧಿವೇಶನ ಆರಂಭವಾಗಿದೆ.  ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದ್ದು, ಇದೇನು ಹೊಸ ವಿಚಾರ ಅಲ್ಲ ಎಂದು ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. 

ಇನ್ನು ಕರ್ನಾಟಕ ರಾಜಕೀಯ ಪ್ರಹಸನ ನಡೆಯುತ್ತಿದ್ದು, ಹಲವು ಶಾಸಕರು ಹಾಗೂ ಸಚಿವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ.  ತಾವೂ ಸಚಿವ ಸ್ಥಾನ ತೊರೆದಿದ್ದು, ಶಾಸಕ ಸ್ಥಾನ ತೊರೆಯುವ ಪ್ರಶ್ನೆ ಇಲ್ಲ ಎಂದು ದೇಶಪಾಂಡೆ ಹೇಳಿದ್ದಾರೆ. 

ಕರ್ನಾಟಕ ರಾಜಕೀಯ ಪ್ರಹಸನದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ಶಾಸಕ ಸ್ಥಾನ ತೊರೆಯುವ ಪ್ರಶ್ನೆಗೆ ಉತ್ತರಿಸಿದ ಅವರು ನಾನೇಕೆ ರಾಜೀನಾಮೆ ನೀಡಬೇಕು ಎಂದು ಕೇಳಿದರು. ಇನ್ನು ಈಗಾಗಲೇ ತಮ್ಮ ಅತೃಪ್ತ ನಡೆಯನ್ನು ಹೊರಹಾಕಿದ್ದು, ಈ ಪಟ್ಟಿಯಲ್ಲಿ ತಾವು ಇದ್ದೇವೋ ಇಲ್ಲವೋ ಎನ್ನುವುದಕ್ಕೆ ಉತ್ತರಿಸಲು ಇದು ಸಮಯ ಎಲ್ಲ ಎಂದರು.  

ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳಯದಲ್ಲಿ ಹಲವು ಅತೃಪ್ತರು ರಾಜೀನಾಮೆ ಬೆನ್ನು ಹತ್ತಿದ್ದು, ದಿನದಿವೂ ಪಟ್ಟಿ ಬೆಳೆಯುತ್ತಿದೆ. ಆದರೆ ತಾವು ಈ ಸಾಲಿಗೆ ಸೇರುವುದಿಲ್ಲ ಎಂದು ಮಧ್ಯಮ ಮತ್ತು ಭಾರೀ ಕೈಗಾರಿಕೆ ಸಚಿವ ದೇಶಪಾಂಡೆ ಸ್ಪಷ್ಟಪಡಿಸಿದರು.