ಬಿಜೆಪಿ ನೀಡಿದ ಆಹ್ವಾನ ತಿರಸ್ಕರಿಸಿದ್ದೇನೆ : ಕಾಂಗ್ರೆಸ್ ಮುಖಂಡ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Sep 2018, 9:22 AM IST
I'm Not Join To BJP  Says MB Patil
Highlights

ಕಾಂಗ್ರೆಸ್- ಬಿಜೆಪಿ ಪಕ್ಷದವರು ಒಂದೇ ಕಡೆಗೆ ಸೇರಬಾರದು ಎಂಬ ನಿಯಮ ಏನಾದರೂ ಇದೆಯಾ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಪ್ರಶ್ನಿಸಿದ್ದಾರೆ. ಅಲ್ಲದೇ ನನಗೂ ಹಿಂದೆ ಬಿಜೆಪಿಯಿಂದ ಆಹ್ವಾನ ಬಂದಿತ್ತು. ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. 

ವಿಜಯಪುರ: ಜಾರಕಿಹೊಳಿ ಹಾಗೂ ಶ್ರೀರಾಮುಲು ಒಂದೇ ಸಮಾಜಕ್ಕೆ ಸೇರಿದವರು. ಸಮಾಜದ ಹಿತದೃಷ್ಟಿ ಯಿಂದ ಅವರು ಒಂದೇ ಕಡೆ ಸೇರಿರಬಹುದು. 

ಕಾಂಗ್ರೆಸ್- ಬಿಜೆಪಿ ಪಕ್ಷದವರು ಒಂದೇ ಕಡೆಗೆ ಸೇರಬಾರದು ಎಂಬ ನಿಯಮ ಏನಾದರೂ ಇದೆಯಾ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿ ಯೂರಪ್ಪ ಹಾಗೂ ನಾನು ಈ ಹಿಂದೆ ಒಂದೇ ವಿಮಾನ ದಲ್ಲಿ ಪ್ರಯಾಣ ಮಾಡಿದ್ದೇವೆ. 

ಹಾಗೆಂದ ಮಾತ್ರಕ್ಕೆ ನಮ್ಮಿಬ್ಬರ ನಡುವೆ ಏನಾದರೂ ಇದೆಯಾ? ಬಿಜೆಪಿ ಯವರು ತನಗೆ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದನ್ನು ವಿನಮ್ರದಿಂದ ತಿರಸ್ಕರಿಸುತ್ತೇನೆ. ನಾನು ಬಿಜೆಪಿ ಸೇರುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

loader