ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವಾಗಲೂ ಕಿಡಿಕಾರುತ್ತಿದ್ದ ಮಮತಾ ಬ್ಯಾನರ್ಜಿ ಆಶ್ಚರ್ಯ ಎಂಬಂತೆ ನಾನು ಮೋದಿ ಪರ ಇದ್ದೇನೆ  ಎಂದು ಬ್ಯಾಟಿಂಗ್  ಮಾಡಿದ್ದಾರೆ.

ಕಲ್ಕತ್ತಾ (ಆ.19): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವಾಗಲೂ ಕಿಡಿಕಾರುತ್ತಿದ್ದ ಮಮತಾ ಬ್ಯಾನರ್ಜಿ ಆಶ್ಚರ್ಯ ಎಂಬಂತೆ ನಾನು ಮೋದಿ ಪರ ಇದ್ದೇನೆ ಎಂದು ಬ್ಯಾಟಿಂಗ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾನು ನರೇಂದ್ರ ಮೋದಿಯನ್ನು ಟೀಕಿಸುವುದಿಲ್ಲ. ನಾನ್ಯಾಕೆ ಟೀಕಿಸಲಿ?ನಾನವರ ಅವರ ಪರವಾಗಿದ್ದೇನೆ. ಆದರೆ ಅಮಿತ್ ಶಾ ಬಗ್ಗೆ ನನ್ನ ಸಹಮತವಿಲ್ಲ. ಅವರು ದೇಶದ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಶಾ ಮೇಲೆ ಹರಿಹಾಯ್ದಿದ್ದಾರೆ.

ಅಮಿತ್ ಶಾ ಕಾರ್ಯವೈಖರಿ ಬಗ್ಗೆ ಕಟುವಾಗಿ ಟೀಕಿಸುತ್ತಾ, ಪ್ರತಿಯೊಬ್ಬರೂ ಭಯಭೀತರಾಗಿದ್ದಾರೆ. ದೇಶದಲ್ಲಿ ಸೂಪರ್ ಸರ್ವಾಧಿಕಾರತ್ವ ನಡೆಯುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಂತ್ರಿಗಳೊಂದಿಗೆ ಹೇಗೆ ಸಭೆ ನಡೆಸುತ್ತಾರೆ? ಪ್ರಧಾನ ಮಂತ್ರಿ ಅಮಿತ್ ಶಾನಾ? ಅಥವಾ ನರೇಂದ್ರ ಮೋದಿಯೋ? ಎಂದು ಪ್ರಶ್ನಿಸಿದ್ದಾರೆ.

ಮಮತಾ ಬ್ಯಾನರ್ಜಿಯವರಿಗೆ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವಿನ ಅಗತ್ಯವಿದೆ. ಹಾಗಾಗಿ ಪ್ರಧಾನಿಯವರನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಮಮತಾ ಹೇಳಿಕೆಗೆ ಪ್ರತಿಪಕ್ಷಗಳು ಟೀಕಿಸಿವೆ.