ಶ್ರೀನಗರ(ಮೇ.06): ಗುಂಡಿನ ದಾಳಿಯಲ್ಲಿ ಹತನಾದ  ಕಾಶ್ಮೀರ ವಿವಿ ಸಹಾಯಕ ಪ್ರಾಧ್ಯಾಪಕ  ಮೊಹಮ್ಮದ್ ರಫಿ ಭಟ್ ಹತನಾಗುವ ಕೆಲವೆ ನಿಮಿಷದ ಮುನ್ನ ತನ್ನ ತಂದೆಯೊಂದಿಗೆ ಮಾತನಾಡಿದ್ದಾನೆ.
ಸೇನೆ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ತನ್ನ ತಂದೆ ಫಯಾಜ್ ಅಹಮದ್ ಭಟ್'ಗೆ ಕರೆ ಮಾಡಿದ್ದ ರಫಿ, ನಿಮಗೇನಾದರೂ ತೊಂದರೆ ನೀಡಿದ್ದರೆ ನನ್ನನ್ನು ಕ್ಷಿಮಿಸಿ. ನಾನು ಅಲ್ಲಾನ ಬಳಿ ಹೋಗುತ್ತಿದ್ದೇನೆ' ಎಂದಿದ್ದಾನೆ. ತಂದೆಯ ಜೊತೆ ಮಾತನಾಡುವಾಗ ತಾಯಿ, ಸೋದರಿ ಹಾಗೂ ಪತ್ನಿ ಕೂಡ ಇದ್ದರು. ತಂದೆ ಕೂಡ ಶರಣಾಗುವಂತೆ ತಿಳಿಸಿದ್ದರು
ಕಾಶ್ಮೀರ ವಿವಿಯ ಸಮಾಜಶಾಸ್ತ್ರದ 33 ವರ್ಷದ ಪ್ರಾಧ್ಯಾಪಕ ರಫಿ ಭಟ್ ಶುಕ್ರವಾರ ಮಧ್ಯಾಹ್ನವಷ್ಟೆ ಉಗ್ರ ಸಂಘಟನೆ ಹಿಜ್ಬುಲ್ ಮುಜಾಯುದ್ದೀನ್ ಸೇರಿಕೊಂಡಿದ್ದ. ಪುತ್ರ ನಾಪತ್ತೆಯಾದ ಬಗ್ಗೆ ಕುಟುಂಬಸ್ಥರು ಕೂಡ ಖಚಿತಪಡಿಸಿದ್ದರು. ರಫಿಯ ಇಬ್ಬರು ಸಂಬಂಧಿಕರು 90ರ ದಶಕದಲ್ಲಿ ಉಗ್ರ ಸಂಘಟನೆಯಲ್ಲಿ ಭಾಗಿಯಾಗಿ ಹತರಾಗಿದ್ದಾರೆ. ತಂದೆ ಫಯಾಜ್ ಅಹಮದ್ ಕೂಡ ಅದೇ ಸಮಯದಲ್ಲಿ ತೊಡಗಿಸಿಕೊಂಡಿದ್ದು ಪೊಲೀಸರು ಸಂರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದರು. ನಂತರದ ದಿನದಿಂದ ಉಗ್ರ ಸಂಘಟನೆ ಸೇರದಂತೆ ಫಯಾಜ್ ತಂದೆತಾಯಿ ಜಾಗ್ರತೆ ವಹಿಸಿದ್ದರು.  
ರಫಿಯನ್ನು ಶ್ರೀನಗರದ 14 ಕಿಮೀ ದೂರದ ಬೋಟಾ ಕಾದಲ್ ಸ್ಥಳದಲ್ಲಿ ನಡೆಸಿದ ಉಗ್ರರ ಕಾರ್ಯಾಚರಣೆಯಲ್ಲಿ ರಫಿ ಸೇರಿದಂತೆ ಐವರು ಉಗ್ರರನ್ನು ಹೊಡೆದುರಿಳಿದ್ದರು. 2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ಬಳಿಕ ಕೆಲವು ಯುವಕರು ಉಗ್ರಸಂಘಟನೆ ಸೇರಿದ್ದು, ಇಂದು ಹತ್ಯೆಯಾದವರಲ್ಲಿ ಅವರು ಇದ್ದಾರೆ ಎನ್ನಲಾಗಿದೆ.

 

 

Click Here: ಉಗ್ರ ಸಂಘಟನೆ ಸೇರಿ 36 ಗಂಟೆಯೊಳಗೆ ಪ್ರೊಫೆಸರ್ ಎನ್ಕೌಂಟರ್..!