ಬೆಂಗಳೂರು[ಜು. 07]  ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆ. ದೇವೇಗೌಡ, ಕುಮಾರಸ್ವಾಮಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅತೃಪ್ತ ಶಾಸಕರು ವಾಪಸ್ ಬರುವ ನಿರೀಕ್ಷೆ ಇದೆ ಎಂದು  ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಪಕ್ಷದಿಂದ ನನ್ನನ್ನು ಮತದಾರರು ಗೆಲ್ಲಿಸಿದ್ದಾರೆ. ಅಧಿಕಾರಕ್ಕಾಗಿ ಚಾಮುಂಡೇಶ್ವರಿ ಮತದಾರರಿಗೆ ಮೋಸ ಮಾಡಲ್ಲ. ನಾನು ಸಹ ಸಚಿವ ಸ್ಥಾನ ತ್ಯಾಗಕ್ಕೆ ನಾನೂ ಸಿದ್ಧ. ಅತೃಪ್ತರಿಗೆ ಸಚಿವ ಸ್ಥಾನ ಕೊಟ್ಟು ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದ್ದಾರೆ.

ಒಟ್ಟಿನಲ್ಲಿ  ಇದೀಗ ಸಿಎಂ ಕುಮಾರಸ್ವಾಮಿ ಸಹ ಅಮೆರಿಕದಿಂದ ವಾಪಸ್ ಬಂದಿದ್ದು ರಾಜ್ಯ ರಾಜಕಾರಣ ಇನ್ನಷ್ಟು ರೋಚಕತೆ ಕಡೆಗೆ ಹೆಜ್ಜೆ ಹಾಕುತ್ತಿದೆ.