ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ತಮಿಳುನಾಡು ಸಿಎಂ ಆಗುವುದನ್ನು ತೀವ್ರವಾಗಿ ಖಂಡಿಸಿದ್ದು, ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಜಯಲಲಿತಾ ಸೊಸೆ ದೀಪಾ ಜಯಕುಮಾರ್ ಹೇಳಿದ್ದಾರೆ.
ನವದೆಹಲಿ (ಫೆ.07): ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ತಮಿಳುನಾಡು ಸಿಎಂ ಆಗುವುದನ್ನು ತೀವ್ರವಾಗಿ ಖಂಡಿಸಿದ್ದು, ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಜಯಲಲಿತಾ ಸೊಸೆ ದೀಪಾ ಜಯಕುಮಾರ್ ಹೇಳಿದ್ದಾರೆ.
ಜಯಲಲಿತಾರ ಜೊತೆ 33 ವರ್ಷ ಒಡನಾಟ ಹೊಂದಿರುವುದು ತಮಿಳುನಾಡು ಮುಖ್ಯಮಂತ್ರಿಯಾಗುವುದಕ್ಕೆ ಮಾನದಂಡವಲ್ಲ. ಜನರು ಕೂಡಾ ಅವರಿಗೆ ಮತ ನೀಡಬಾರದು. ಕೆಲವು ಪಕ್ಷಗಳ ನಾಯಕರು ಶಶಿಕಲಾಗೆ ಹೆದರಿ ಸುಮ್ಮನಿದ್ದಾರೆ. ಆದರೆ ನಾನು ಹೆದರುವುದಿಲ್ಲ ಎಂದು ದೀಪಾ ಜಯಕುಮಾರ್ ಗುಡುಗಿದ್ದಾರೆ.
ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಶಶಿಕಲಾ ಸ್ಪರ್ಧಿಸುವ ಕ್ಷೇತ್ರದಿಂದಲೇ ನಾನು ಸ್ಪರ್ಧಿಸಬೇಕೆಂದಿಲ್ಲ. ನಾನವರಿಗೆ ಹೆದರುವುದಿಲ್ಲ.ಶಶಿಕಲಾ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ದಿನ ತಮಿಳರ ಪಾಲಿಗೆ ಕರಾಳ ದಿನವಾಗಿದೆ.
ರಾಜ್ಯದಲ್ಲಿ ಅತಂತ್ರ ಸ್ಥಿತಿಯಿದ್ದು, ಶಶಿಕಲಾ ಸಿಎಂ ಆಗುವುದರಿಂದ ಜನರು ಚಿಂತೆಗೀಡಾಗಿದ್ದಾರೆ ಎಂದು ದೀಪಾ ಹೇಳಿದ್ದಾರೆ.
