ಭಾರತದಲ್ಲಿ ಬುಲೆಟ್ ಹಾಗೂ ಹೈಪರ್ ಲೂಪ್ ರೈಲಿನ ಬಳಿಕ ಇದೀಗ  ಹೈಡ್ರೋಜನ್ ಚಾಲಿತ ರೈಲನ್ನು ಪರಿಚಯಿಸಲು ಫ್ರಾನ್ಸ್‌ನ ಆಲ್‌ಸ್ಟೋಮ್ ಕಂಪನಿ ಮುಂದಾಗಿದೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಆಲ್‌ಸ್ಟೋಮ್ ಕಂಪನಿಯ ಮುಖ್ಯಸ್ಥ ಹೆನ್ರಿ ಪೌಪರ್ಟ್, ಭಾರತದಲ್ಲಿ ಹೈಡ್ರೋಜನ್  ರೈಲು ಪರಿಚಯಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

ನವದೆಹಲಿ (ಮಾ. 13): ಭಾರತದಲ್ಲಿ ಬುಲೆಟ್ ಹಾಗೂ ಹೈಪರ್ ಲೂಪ್ ರೈಲಿನ ಬಳಿಕ ಇದೀಗ ಹೈಡ್ರೋಜನ್ ಚಾಲಿತ ರೈಲನ್ನು ಪರಿಚಯಿಸಲು ಫ್ರಾನ್ಸ್‌ನ ಆಲ್‌ಸ್ಟೋಮ್ ಕಂಪನಿ ಮುಂದಾಗಿದೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಆಲ್‌ಸ್ಟೋಮ್ ಕಂಪನಿಯ ಮುಖ್ಯಸ್ಥ ಹೆನ್ರಿ ಪೌಪರ್ಟ್, ಭಾರತದಲ್ಲಿ ಹೈಡ್ರೋಜನ್ ರೈಲು ಪರಿಚಯಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

ಹೈಡ್ರೋಜನ್ ರೈಲುಗಳು ಡೀಸೆಲ್ ರೈಲುಗಳಿಗೆ ಪರ್ಯಾಯವಾಗಿದೆ. ಈ ರೈಲುಗಳನ್ನು ಈಗಾಗಲೇ ಜರ್ಮನಿಯಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಕೆನಡಾ ಸೇರಿದಂತೆ ಹಲವರು ದೇಶಗಳು ಇದರ ಪ್ರಯೋಗ ನಡೆಸುತ್ತಿವೆ.

ಏನಿದು ಹೈಡ್ರೋಜನ್ ಟ್ರೇನ್?:

ಹೈಡ್ರೋಜನ್ ಅಥವಾ ಹೈಡ್ರಿಲ್ ರೈಲುಗಳು ಎಂಜಿನ್‌ಗೆ ಡೀಸೆಲ್ ಬದಲು ಹೈಡ್ರೋಜನ್ ಅನ್ನು ಇಂಧನವಾಗಿ ಬಳಸುತ್ತವೆ. ಹೈಡ್ರಿಲ್ ರೈಲುಗಳು ಹೈಡ್ರೋಜನ್‌ನ ರಾಸಾಯನಿಕ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುತ್ತವೆ. ಹೈಡ್ರೋಜನ್ ದಹಿಸುವ ಮೂಲಕ ಅಥವಾ ಹೈಡ್ರೋಜ್‌ನಿಂದ ಇಲೆಕ್ಟ್ರಿಕ್ ಯಂತ್ರವನ್ನು ಓಡಿಸುವ ಮೂಲಕ ರೈಲು ಚಲಿಸುತ್ತದೆ.