ಆತ್ಮಹತ್ಯೆಗೆ ಶರಣಾದ ಟಿವಿ ಆ್ಯಂಕರ್

First Published 2, Apr 2018, 5:08 PM IST
Hyderabad TV news anchor V Radhika Reddy commits suicide
Highlights

'ನನ್ನ ಮೆದುಳೇ ನನ್ನ ಶತ್ರು' ಎಂದು ಡೆತ್ ನೋಟ್ ಬರೆದಿಟ್ಟು, ತೆಲುಗು ಟಿವಿ ಚಾನೆಲ್ ಆ್ಯಂಕರ್‌ವೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೈದರಾಬಾದ್: 'ನನ್ನ ಮೆದುಳೇ ನನ್ನ ಶತ್ರು' ಎಂದು ಡೆತ್ ನೋಟ್ ಬರೆದಿಟ್ಟು, ತೆಲುಗು ಟಿವಿ ಚಾನೆಲ್ ಆ್ಯಂಕರ್‌ವೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

36 ವರ್ಷದ ವಿ ರಾಧಿಕಾ ರೆಡ್ಡಿ ಆತ್ಮಹತ್ಯೆಗೆ ಶರಣಾದವರು. ಅವರು ಖಿನ್ನತೆಯಿಂದ ಬಳಲುತ್ತಿದ್ದರು. ಅವರು ಚಾನೆಲ್ ವಿ6ಗೆ ಕಾರ್ಯನಿರ್ವಹಿಸುತ್ತಿದ್ದರು. ಪೋಷಕರೊಂದಿಗೆ ವಾಸಿಸುತ್ತಿದ್ದ ಅವರು, ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಾರೆ.

ಆರು ತಿಂಗಳ ಹಿಂದೆಯಷ್ಟೇ ಪತಿಯಿಂದ ವಿಚ್ಚೇದನ ಪಡೆದಿದ್ದ ರಾಧಿಕಾಗೆ ವಿಶೇಷ ಚೇತನ ಮಗನಿದ್ದಾನೆ. ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
 

loader