ಸಿದ್ದು ಚುನಾವಣೆಗೆ ಸ್ಪರ್ಧಿಸೋದೇ ಡೌಟು

ಮೈಸೂರು(ಅ.06): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಮಾಜಿ ಸಂಸದ, ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್. ವಿಶ್ವನಾಥ್, ಚುನಾವಣೆ ಬಳಿಕ ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸೂಟ್‌ಕೇಸ್ ಕೊಟ್ಟು ಸಿಎಂ ಆಗುವ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಇದ್ದಾರೆ. ಸಿಎಂ ಬಳಿ ಎಲ್ಲಾ ಇದೆ. ಆದರೆ ಕಾಮನ್‌ಸೆನ್ಸ್ ಇಲ್ಲ ಎಂದು ಟೀಕಿಸಿದ್ದಾರೆ.