ವರದಕ್ಷಿಣೆ ತರಲಿಲ್ಲ ಎಂದು ಪಾಪಿ ಪತಿಯೊಬ್ಬ ತನ್ನ ಪತ್ನಿಗೆ ಬೆಂಕಿ ಹಚ್ಚಿರುವ ಪ್ರಕರಣವೊಂದು ಕೊಪ್ಪಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೋಲಾರ(ಅ.08): ವರದಕ್ಷಿಣೆ ತರಲಿಲ್ಲ ಎಂದು ಪಾಪಿ ಪತಿಯೊಬ್ಬ ತನ್ನ ಪತ್ನಿಗೆ ಬೆಂಕಿ ಹಚ್ಚಿರುವ ಪ್ರಕರಣವೊಂದು ಕೊಪ್ಪಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಬೂದುಗುಂಪಾ ಗ್ರಾಮದ ಸುಜಾತ ಎಂಬಾಕೆ ಕಿರುಕುಳಕ್ಕೆ ಒಳಗಾದ ಮಹಿಳೆ. ಈಕೆಯನ್ನು ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ಉದಯ್ ಕುಮಾರ್ ಎನ್ನುವನೊಂದಿಗೆ 2013ರಲ್ಲಿ ಮದುವೆ ಮಾಡಿ ಕೊಡಲಾಗಿತ್ತು. ಆದ್ರೆ ವರದಕ್ಷಿಣೆ ಕಿರುಕುಳ ಕೊಡುತ್ತಲೇ ಹೆಂಡತಿ ಮಲಗಿದ್ದಾಗ ಉದಯ್ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಸುಜಾತಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ಲು. ಸುಜಾತಾಳ ದೇಹ ಶೇ.80ರಷ್ಟು ಸುಟ್ಟಿದ್ದು, ಇದೀಗ ಬೇರೆಯವರ ತನ್ನ ತವರು ಮನೆಯವರ ಆಸರೆಯಲ್ಲಿ ಜೀವನ ಮಾಡ್ತಿದ್ದಾಳೆ.
ಬಸಾಪಟ್ಟಣ ಗ್ರಾಮದ ಹಿರಿಯರು ಪೊಲೀಸ್ ಠಾಣೆಯಲ್ಲಿ ದೂರು ಕೊಡಬೇಡ, ದೂರ ಕೊಟ್ರೆ ನಿನಗೆ ನ್ಯಾಯ ಸಿಗಲ್ಲ ಅಂತ ಬೆದರಿಕೆ ಹಾಕಿ ಪ್ರಕರಣ ಮುಚ್ಚಿ ಹಾಕಿದ್ರು. ಆದ್ರೆ ಇದೀಗ ಉದಯ್ ಕುಮಾರ್ ಮತ್ತೊಂದು ಮದುವೆಯಾಗಲು ಮುಂದಾಗಿದ್ದಾನೆ. ಇದ್ರಿಂದ ಸುಜಾತಾ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಳೆ.
