ವಿಜಯಪುರ(ನ.13): ಪತ್ನಿಯನ್ನು ಪ್ರೀತಿಸಿ ಕಾಪಾಡಬೇಕಾದ ಪತಿಯೇ ತನ್ನ ನಾಲ್ಕು ತಿಂಗಳ ಗರ್ಭಿಣಿ ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ವಿಜಯಪುರದ ಕಸ್ತೂರ ಬಾ ಕಾಲೋನಿಯಲ್ಲಿ  ನಡೆದಿದೆ.

ಯಮನವ್ವ ಪರಸಪ್ಪ ಪಾನಪಟ್ಟಿ ಎಂಬಾಕೆಯೇ ಬೆಂಕಿಯಲ್ಲಿ ಬೆಂದು ಜೀವನ್ಮರಣ ಸ್ಥಿತಿಯಲ್ಲಿರುವ ದುರ್ದೈವಿ. ಈಕೆಯ ಪತಿ ಪರಸಪ್ಪ ತನ್ನ ಹೆಂಡತಿಯ ಮೇಲೆ ಸೀಮೆ ಎಣ್ಣಿ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಗಾಯಾಳು ಯಮನವ್ವನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.