ಇದೇ 23ರ ರಾತ್ರಿ ಕುಡಿದು ಮನೆಗೆ ಬಂದಿದ್ದ ಗಂಡ ದಿಲೀಪ್ ಕುಮಾರ್, ಕುಡಿದ ಮತ್ತಿನಲ್ಲಿ ರಾತ್ರಿ 2 ಗಂಟೆಗೆ ಎದ್ದು, ತವರು ಮನೆಯಿಂದ ಒಡವೆ‌ ತರುವಂತೆ ಹೆಂಡತಿ ಜೊತೆ ಜಗಳ ಮಾಡಿದ್ದಾನೆ.
ಬೆಂಗಳೂರು(ಸೆ.26): ವರದಕ್ಷಿಣೆಗಾಗಿ ಹೆಂಡತಿ ಮೇಲೆ ಗಂಡನೇ ಹೀನವಾಗಿ ನಡೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಹೆಂಡತಿಯ ಮರ್ಮಾಂಗಕ್ಕೆ ಬಿಸಿ ಇಸ್ತ್ರಿ ಪೆಟ್ಟಿಗೆ ಇಟ್ಟು ದೌರ್ಜನ್ಯ ನಡೆಸಿದ ನೀಚ ಕೃತ್ಯ ಬಯಾಲಾಗಿದೆ.
ದಿಲೀಪ್ ಎಂಬಾತ ಇದೇ ತಿಂಗಳ 23 ರಂದು ತನ್ನ ಪತ್ನಿ ಜಾಕ್ವೆಲಿನ್ ಮೇಲೆ ಹಲ್ಲೆ ನಡೆಸಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ಹೆಂಡತಿ ದೂರು ನೀಡಿದ್ದಾಳೆ. ಇದೇ 23ರ ರಾತ್ರಿ ಕುಡಿದು ಮನೆಗೆ ಬಂದಿದ್ದ ಗಂಡ ದಿಲೀಪ್ ಕುಮಾರ್, ಕುಡಿದ ಮತ್ತಿನಲ್ಲಿ ರಾತ್ರಿ 2 ಗಂಟೆಗೆ ಎದ್ದು, ತವರು ಮನೆಯಿಂದ ಒಡವೆ ತರುವಂತೆ ಹೆಂಡತಿ ಜೊತೆ ಜಗಳ ಮಾಡಿದ್ದಾನೆ. ಆದ್ರೆ ಜಾಕ್ವೆಲಿನ್ ಆತನ ಮಾತನ್ನ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪಾಪಿ ಪತಿ, ಬಿಸಿ ಇಸ್ತ್ರಿ ಪೆಟ್ಟಿಗೆಯನ್ನ ಹೆಂಡತಿಯ ಮರ್ಮಾಂಗಕ್ಕೆ ಇಟ್ಟು ದೌರ್ಜನ್ಯ ನಡೆಸಿದ್ದಾನೆ. ನಂತರ ಚಾಕುವಿನಿಂದ ಹೆಂಡತಿ ತಲೆಗೆ ಹಲ್ಲೆ ನಡೆಸಿದ್ದಾನೆ. ಗಾಯಗೊಂಡಿದ್ದ ಜಾಕ್ವಲಿನ್ಗೆ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ನೀಡಿದ್ದಾಳೆ.
