ಪತಿರಾಯನೊಬ್ಬ ಹೆಂಡತಿಗೆ ತ್ರಿವಳಿ ತಲಾಖ್ ನೀಡಿ ಹದಿನಾರು ವರ್ಷಗಳ ದಾಂಪತ್ಯವನ್ನು ಕಡಿದುಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬೆಂಗಳೂರಿನ ಕೆಜೆಹಳ್ಳಿಯ ಅಬ್ರಾರ್ ತಲಾಖ್ ನೀಡಿದ ಪತಿರಾಯ. ಈತ ಸಂಘಟನೆಯೊಂದಿಗೆ ಬಂದು ಮೂರು ಬಾರಿ ತಲಾಖ್ ಘೋಷಿಸಿ ವಿಚ್ಛೇಧನ ನೀಡಿದ್ದಾನೆ.

ಬೆಂಗಳೂರು(ಜು.02): ಪತಿರಾಯನೊಬ್ಬ ಹೆಂಡತಿಗೆ ತ್ರಿವಳಿ ತಲಾಖ್ ನೀಡಿ ಹದಿನಾರು ವರ್ಷಗಳ ದಾಂಪತ್ಯವನ್ನು ಕಡಿದುಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬೆಂಗಳೂರಿನ ಕೆಜೆಹಳ್ಳಿಯ ಅಬ್ರಾರ್ ತಲಾಖ್ ನೀಡಿದ ಪತಿರಾಯ. ಈತ ಸಂಘಟನೆಯೊಂದಿಗೆ ಬಂದು ಮೂರು ಬಾರಿ ತಲಾಖ್ ಘೋಷಿಸಿ ವಿಚ್ಛೇಧನ ನೀಡಿದ್ದಾನೆ.

ಬೈಕ್ ಮತ್ತು ಕಾರು ಕಾರು ಕಳ್ಳತನಗಳಲ್ಲಿ ಆರೋಪಿಯಾಗಿರುವ ಅಬ್ರಾರ್ ಹದಿನಾರು ವರ್ಷಗಳ ಹಿಂದೆ ಉಮ್ಮಿಹನಿ ಎಂಬುವವರನ್ನು ಮದುವೆಯಾಗಿದ್ದ ದಂಪತಿಗೆ ಅಂಗವಿಕಲ ಮಗು ಸೇರಿ ಇಬ್ಬರು ಮಕ್ಕಳಿದ್ರು. ಈತ 12ವರ್ಷದ ಸ್ವಂತ ಮಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಅಂಗವಿಕಲ ಮಗುವಿಗೆ ಸರಿಯಾಗಿ ಚಿಕಿತ್ಸೆ ಕೊಡಿಸದ ಕಾರಣ ಆ ಮಗು ಕೆಲ ತಿಂಗಳುಗಳ ಹಿಂದೆ ಸಾವನ್ನಪ್ಪಿತ್ತು. ಇದರೊಂದಿಗೆ 50 ಸಾವಿರ ವರದಕ್ಷಿಣೆ ತರುವಂತೆಯೂ ಒತ್ತಾಯಿಸುತ್ತಿದ್ದ.

ಹಣ ತರಲು ನಿರಾಕರಿಸಿದ್ದಕ್ಕಾಗಿ ತಲಾಖ್ ನೀಡಿದ್ದು ಈತನ ವಿರುದ್ಧ ಹೆಂಡತಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.