ಆದೋನಿ ಮೂಲದ ಹಾಜರಾ ಬೇಗಂ ಎಂಬ 35 ವಷ೯ದ ಈ ಮಹಿಳೆಯನ್ನು  ರಾಯಚೂರಿನ ಇದ್ರೀಸ್ ಕಾರೋಬಾರಿ ಎಂಬುವನಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ ಮದುವೆಯಾದ ದಿನದಿಂದಲೂ ಈತ ಪತ್ನಿಗೆ ಕಿರುಕುಳ ನೀಡುತ್ತಲೇ ಬಂದಿದ್ದನೆಂದು ಹೇಳಲಾಗಿದೆ.

ರಾಯಚೂರು (ಫೆ.02): ಅನುಮಾನಾಸ್ಪದವಾಗಿ ಮಹಿಳೆಯೋವ೯ರು ಸಾವನ್ನಪ್ಪಿದ್ದು, ಇದು ಸಹಜ ಸಾವಲ್ಲ ಕೊಲೆ ಎಂದು ಮಹಿಳೆಯ ಕುಟುಂಬದವರು ಆರೋಪಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

.ಆಕೆಯ ಪತಿಯೇ ಚಿತ್ರಹಿಂಸೆ ನೀಡಿ ಕೊಲೆ ಮಾಡಿ ರೈಲ್ವೇ ಹಳಿ ಮೇಲೆ ಬಿಸಾಕಿದ್ದಾನೆ ಎಂದು ಮಹಿಳೆಯ ಕುಟುಂಬ ದೂರು ದಾಖಲಿಸಿದೆ.

ಆದೋನಿ ಮೂಲದ ಹಾಜರಾ ಬೇಗಂ ಎಂಬ 35 ವಷ೯ದ ಈ ಮಹಿಳೆಯನ್ನು ರಾಯಚೂರಿನ ಇದ್ರೀಸ್ ಕಾರೋಬಾರಿ ಎಂಬುವನಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ ಮದುವೆಯಾದ ದಿನದಿಂದಲೂ ಈತ ಪತ್ನಿಗೆ ಕಿರುಕುಳ ನೀಡುತ್ತಲೇ ಬಂದಿದ್ದನೆಂದು ಹೇಳಲಾಗಿದೆ.

ನಿನ್ನೆ ರಾತ್ರಿಯೂ ಆಕೆಗೆ ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆಗೈದು ಆಕೆಯನ್ನು ಹಳಿ ಮೇಲೆ ಬಿಸಾಡಿದ್ದಾನೆಂದು ಕುಟುಂಬದವರು ಮಾಡುತ್ತಿರುವ ಆರೋಪ.

ರಾತ್ರಿ ಕೊಲೆ ಮಾಡಿ ಮುಂಜಾನೆ ಮಗನಿಗೆ ನಿನ್ನ ತಾಯಿ ಎಲ್ಲಿ ಹೋಗಿದ್ದಾಳೆ ನೋಡು, ಅಲ್ಲೇ ರೈಲ್ವೇ ಹಳಿ ಮೇಲೋ ಎಲ್ಲೋ ಇರ್ಬೇಕು ನೋಡು ಅಂದಿದ್ದಾನೆ. ಮಗ ಹೋಗಿ ನೋಡಿದಾಗ ಅರಬ್ ಮೊಹಲ್ಲಾದ ಬಳಿ ಇರುವ ರೈಲ್ವೇ ಹಳಿ ಮೇಲೆ ಶವವಾಗಿ ಬಿದ್ದಿದ್ದಾಳೆ.

ಮಗ ವಿಷಯ ತಿಳಿಸಿದಾಗ, ನಾನು ನೋಡ್ಕೊಳ್ತೇನೆ ಮನೆಗೆ ಶವ ತೆಗೆದುಕೊಂಡು ಬಾ ಅಂತ ಮಗನಿಗೆ ತಿಳಿಸಿದ್ದಾನೆ. ಕುತ್ತಿಗೆ, ಹಾಗೂ ಕಾಲುಗಳಿಗೆ, ತಲೆಗೆ ಗಾಯಗಳಾಗಿದ್ದು, ಇದು ಖಂಡಿತ ಕೊಲೆ ಎಂದು ರೈಲ್ವೇ ಪೊಲೀಸ್ ಠಾಣೆಯಲ್ಲಿ ಹಾಜರಾ ಕುಟುಂಬದವರು ಪತಿಯ ಮೇಲೆ ದೂರು ನೀಡಿದ್ದಾರೆ. ಪತಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ..