ಸಿ ಮತ್ತು ಡಿ ಗ್ರೂಪ್ ಗೆ ಶೇಕಡಾ 100 ರಷ್ಟು ಮೀಸಲಾತಿ ನೀಡಬೇಕು, ಒಟ್ಟಾರೆ ಶೇಕಡಾ 70ರಷ್ಟು ಮೀಸಲಾತಿ ನೀಡಬೇಕು ಎಂಬ ಅಂಶವನ್ನು ಕರಡಿನಲ್ಲಿ ಉಲ್ಲೇಖಿಸಲಾಗಿದೆ. ಸಿ ಮತ್ತು ಡಿ ಹುದ್ದೆ  ಐಟಿ ಬಿಟಿ ವಲಯಕ್ಕೂ  ಅನ್ವಯಿಸಲಿದ್ದು,  ಕರ್ನಾಟಕ ಇಂಡಸ್ಟ್ರೀಯಲ್ ಎಂಪ್ಲಾಯ್ ಮೆಂಟ್ ರೂಲ್ಸ್ ೧೯೬೧ರ ಕಾನೂನು ತಿದ್ದುಪಡಿಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಕಾರ್ಮಿಕ ಇಲಾಖೆಯಿಂದ ಕಾನೂನು ಇಲಾಖೆಗೆ ಅಭಿಪ್ರಾಯಕ್ಕಾಗಿ ತಿದ್ದುಪಡಿ ಕರಡು ರವಾನೆಯಾಗಿದ್ದು,  ಖಾಸಗಿ ಕಂಪನಿಗಳಲ್ಲಿ ಎಷ್ಟು ಜನ ಕನ್ನಡಿಗರಿಗೆ ಉದ್ಯೋಗ ಸಿಕ್ಕಿದೆ ಎಂಬ ಮಾಹಿತಿ ಪಡೆಯಲು ಇದರಿಂದ ಅನುಕೂಲವಾಗಲಿದೆ.  ರಾಜ್ಯ ಸರ್ಕಾರದಿಂದ ಭೂಮಿ, ನೀರು, ತೆರಿಗೆ ವಿನಾಯಿತಿ ಪಡೆದಿರುವ ಖಾಸಗಿ ಕಂಪನಿಗಳಿಗೆ ಉದ್ದೇಶಿತ ತಿದ್ದುಪಡಿ ಕಾನೂನು ಅನ್ವಯವಾಗಲಿದೆ.

ಬೆಂಗಳೂರು(ಡಿ22): ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ ಇರುವ ಜೊತೆಯಲ್ಲೇ ಈಗ ಖಾಸಗಿ ಕಂಪನಿಗಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ ಕಲ್ಪಿಸುವ ಕುರಿತ ಕಾನೂನು ತಿದ್ದುಪಡಿಗೆ ರಾಜ್ಯ ಸರಕಾರ ಮುಂದಾಗಿದೆ. ಈ ಬಗ್ಗೆ ಈಗಾಗಲೇ ಸರ್ಕಾರ ಕರಡು ಸಿದ್ಧಪಡಿಸಿದ್ದು, ಬ್ಲೂ ಕಾಲರ್ ಕೆಲಸದಲ್ಲಿ ಶೇಕಡಾ 100 ರಷ್ಟು ಮೀಸಲು ನಿಗದಿಯಾಗಲಿದೆ.