ಬೆಂಗಳೂರು [ಜು.12] : ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮುಂಬೈಗೆ ತೆರಳಿದ್ದ ವೇಳೆ ಹೋಟೆಲ್ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆ ಮಾನವ ಹಕ್ಕು ಉಲ್ಲಂಘನೆ ಆರೋಪಡದಿಯಲ್ಲಿ ಮುಂಬೈನ ರಿನೈಸಾನ್ಸ್ ಹೋಟೆಲ್ ವಿರುದ್ಧ ದೂರು ದಾಖಲಾಗಿದೆ. 

ಆನಂದ್ ಕುಮಾರ್ ಎಂಬುವವರು ರಾಜ್ಯ ಮಾನವ ಹಕ್ಕು ಆಯೋಗ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಹೋಟೆಲ್ ವಿರುದ್ಧ ದೂರು ನೀಡಿದ್ದಾರೆ. 

ಸಚಿವ ಡಿಕೆಶಿ ತಮ್ಮ ಹೆಸರಲ್ಲಿ ಹೋಟೆಲ್ ಬುಕ್ ಮಾಡಿ ಮುಂಬೈಗೆ ತೆರಳಿದ್ದರು. ಆದರೆ ಇಲ್ಲಿ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಹೋಟೆಲ್ ಸಿಬ್ಬಂದಿ ಒಳಗೆ ಪ್ರವೇಶಿಸಲು ನಿರಾಕರಿಸಿದ್ದು,  ಕ್ರಿಮಿನಲ್ ರೀತಿಯಾಗಿ ಟ್ರೀಟ್ ಮಾಡಿದ್ದರು. ಹೀಗೆ ಮಾಡಿ ಹೋಟೆಲ್ ಸಿಬ್ಬಂದಿ ಮಾನವ  ಹಕ್ಕು  ಉಲ್ಲಂಘಿಸಿದ್ದಾರೆ. ಎರಡು ಘಂಟೆಗಳ ಕಾಲ ರಸ್ತೆಯಲ್ಲೇ  ಕುಳಿತುಕೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.  

ಡಿಕೆಶಿ ಕರ್ನಾಟಕದ ಸಚಿವರು ಎಂದು ತಿಳಿದಿದ್ದರೂ ಕೂಡ ಅವರಿಗೆ ಗೌರವ ನೀಡದೇ, ಗೌರವಕ್ಕೆ ಧಕ್ಕೆ ತರಲಾಗಿದೆ. ಈ ನಿಟ್ಟಿನಲ್ಲಿ ಹೋಟೆಲ್ ಹಾಗೂ ಮಹಾರಾಷ್ಟ್ರ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.