Asianet Suvarna News Asianet Suvarna News

ಮೈಸೂರಲ್ಲಿ ಜೂನ್ 21ಕ್ಕೆ ಗಿನ್ನೆಸ್ ದಾಖಲೆ ಯೋಗ

ಈ ಕಾರ್ಯಕ್ರಮಕ್ಕಾಗಿ ರು.35ರಿಂದ 40 ಲಕ್ಷ ವೆಚ್ಚವಾಗುವ ನಿರೀಕ್ಷೆ ಇದೆ. ಪ್ರವಾಸೋದ್ಯಮ ಇಲಾಖೆಯು ರು.25 ಲಕ್ಷ ನೀಡುವ ಭರವಸೆ ನೀಡಿದೆ. ಅರಮನೆ ಮಂಡಳಿಯಿಂದ ರು.10 ಲಕ್ಷ ನೀಡಲಾಗುತ್ತಿದೆ. ಅಲ್ಲದೆ, ವೈಷ್ಣವಿ ಸ್ವೀಟ್ಸ್‌ ಮತ್ತು ಸೈಕಲ್'ಪ್ಯೂರ್‌ ಅಗರ್‌ಬತ್ತೀಸ್‌ ತಲಾ ರು.3 ಲಕ್ಷ ಪ್ರಾಯೋಕತ್ವ ನೀಡಲಿವೆ. ರಾಷ್ಟ್ರೀಯ ಭಾವೈಕ್ಯತೆ, ಸಾಮರಸ್ಯ ಮತ್ತು ವಿಶ್ವಶಾಂತಿ ಮಂತ್ರ ಸಾರಲು ವಿವಿಧ ಧರ್ಮದ ಧರ್ಮಗುರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ

huge yoga show at mysore to create guinness record on june 21

ಮೈಸೂರು: ಜೂ.21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನದಂದು 60 ಸಾವಿರ ಮಂದಿ ಏಕಕಾಲಕ್ಕೆ ಸಾಮೂಹಿಕ ಯೋಗಾಭ್ಯಾಸ, 5001 ಮಂದಿ ಏಕಕಾಲಕ್ಕೆ ಉದ್ದ ಸಾಲಿನಲ್ಲಿ ಯೋಗ ಮಾಡುವುದನ್ನು ಗಿನ್ನೆಸ್‌ ದಾಖಲೆಗೆ ಕಳುಹಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ರಂದೀಪ್‌, ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜೂ.21ರಂದು 3ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಶ್ವಾದಾದ್ಯಂತ ಯೋಗವನ್ನು ಹರಡುವಲ್ಲಿ ಮೈಸೂರು ವಿಶಿಷ್ಟಕೊಡುಗೆ ನೀಡುತ್ತಿದೆ. ಸುಮಾರು 60 ಸಾವಿರ ಯೋಗಪಟುಗಳೊಂದಿಗೆ ಸಾಮೂಹಿಕ ಯೋಗಾಭ್ಯಾಸ ಮಾಡಲಾಗುವುದು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನವು ಗಿನ್ನೆಸ್‌ ದಾಖಲೆಗೆ ಸೇರಿದೆ. ಆ ಕಾರ್ಯಕ್ರಮದಲ್ಲಿ ಸುಮಾರು 36 ಸಾವಿರ ಮಂದಿ ಭಾಗವಹಿಸಿದ್ದರು. ಮೈಸೂರು ಯೋಗ ಪ್ರದರ್ಶನದಲ್ಲಿ 60 ಸಾವಿರ ಮಂದಿ ಸಾಮೂಹಿಕವಾಗಿ ಯೋಗ ಮಾಡುವ ಮೂಲಕ ಗಿನ್ನೆಸ್‌ ದಾಖಲೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, 5001 ಮಂದಿ ಏಕಕಾಲದಲ್ಲಿ ಉದ್ದದ ಸಾಲಿನಲ್ಲಿ ಯೋಗ ಮಾಡುವುದನ್ನು ಸಹ ಗಿನ್ನೆಸ್‌ ದಾಖಲೆಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮಕ್ಕಾಗಿ ರು.35ರಿಂದ 40 ಲಕ್ಷ ವೆಚ್ಚವಾಗುವ ನಿರೀಕ್ಷೆ ಇದೆ. ಪ್ರವಾಸೋದ್ಯಮ ಇಲಾಖೆಯು ರು.25 ಲಕ್ಷ ನೀಡುವ ಭರವಸೆ ನೀಡಿದೆ. ಅರಮನೆ ಮಂಡಳಿಯಿಂದ ರು.10 ಲಕ್ಷ ನೀಡಲಾಗುತ್ತಿದೆ. ಅಲ್ಲದೆ, ವೈಷ್ಣವಿ ಸ್ವೀಟ್ಸ್‌ ಮತ್ತು ಸೈಕಲ್'ಪ್ಯೂರ್‌ ಅಗರ್‌ಬತ್ತೀಸ್‌ ತಲಾ ರು.3 ಲಕ್ಷ ಪ್ರಾಯೋಕತ್ವ ನೀಡಲಿವೆ. ರಾಷ್ಟ್ರೀಯ ಭಾವೈಕ್ಯತೆ, ಸಾಮರಸ್ಯ ಮತ್ತು ವಿಶ್ವಶಾಂತಿ ಮಂತ್ರ ಸಾರಲು ವಿವಿಧ ಧರ್ಮದ ಧರ್ಮಗುರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಮೈಸೂರಿನಲ್ಲಿ 300ಕ್ಕೂ ಹೆಚ್ಚು ಯೋಗ ತರಬೇತಿ ಕೇಂದ್ರಗಳಿದ್ದು, ಪ್ರತಿನಿತ್ಯ 15 ಸಾವಿರ ಯೋಗಾಸಕ್ತರು ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ, 35 ಸಾವಿರ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದರು. ಅರಮನೆ ಆವರಣದಲ್ಲಿ ಮುಖ್ಯ ವೇದಿಕೆಯಿದ್ದು, ಅರಮನೆ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಯೋಗ ಮಾಡು​ವವರಿಗೂ ಮುಖ್ಯ ವೇದಿಕೆಯಿಂದಲೇ ಯೋಗಾಭ್ಯಾಸದ ಕುರಿತು ನಿರ್ದೇಶನ ನೀಡಲಾಗುತ್ತದೆ. 60 ಸಾವಿರ ಜನರಿಗೂ ತಲುಪುವಂತೆ ಧ್ವನಿ ವ್ಯವಸ್ಥೆ ಮಾಡಲಾಗುತ್ತದೆ. ಯೋಗಪಟು​ಗಳಿಗೆ ಶುಲ್ಕ ರಹಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಜೂ.11 ಮತ್ತು 18ರಂದು ಪೂರ್ವಭಾವಿ ಪ್ರದರ್ಶನ ನಡೆಯಲಿದೆ. ಜೂ.11ರಂದು 8 ಸಾವಿರ ಮಂದಿ, ಜೂ.18ರಂದು 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಮೋದಿ ಕಾರ್ಯಕ್ರಮದ ಹೆಸರಲ್ಲಿದೆ ದಾಖಲೆ:
2015ರಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಸುಮಾ​ರು 36 ಸಾವಿರ ಮಂದಿ ಮೋದಿ ಜತೆ ಯೋಗಾಭ್ಯಾಸ ಮಾಡಿದ್ದರು. ಮೈಸೂರಿನಲ್ಲಿ ಒಮ್ಮೆಲೆ 60 ಸಾವಿರ ಮಂದಿ ಯೋಗಾಭ್ಯಾಸಕ್ಕೆ ತಯಾರಾಗಿದ್ದಾರೆ. ತನ್ಮೂಲಕ ಮೋದಿ ಕಾರ್ಯಕ್ರಮದ ದಾಖಲೆ ಮುರಿಯಲು ಸಿದ್ಧತೆಗಳು ನಡೆದಿವೆ

ಆಸಕ್ತರು http://www.yogadamysuru.com/ ವೆಬ್‌'ಸೈಟ್‌'ನಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ಅಥವಾ ದೂ. 0821- 2422096 ಸಂಪರ್ಕಿಸಬಹುದು.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios