Asianet Suvarna News Asianet Suvarna News

ಪೋಷಕರೇ ಎಚ್ಚರ! ಆರ್’ಟಿಇ  ಅರ್ಜಿ ಸಲ್ಲಿಕೆಯಲ್ಲಿ ನಡೆಯುತ್ತಿದೆ ಭಾರೀ ಗೋಲ್ಮಾಲ್!

ಪೋಷಕರೇ ಎಚ್ಚರ! ಆರ್’ಟಿಇ  ಅರ್ಜಿ ಸಲ್ಲಿಕೆಯಲ್ಲಿ ಬಾರೀ ಗೋಲ್ಮಾಲ್ ನಡೆದಿದೆ. 

Huge Golmal in RTI

ಬೆಂಗಳೂರು (ಮಾ. 14): ಪೋಷಕರೇ ಎಚ್ಚರ! ಆರ್’ಟಿಇ  ಅರ್ಜಿ ಸಲ್ಲಿಕೆಯಲ್ಲಿ ಬಾರೀ ಗೋಲ್ಮಾಲ್ ನಡೆದಿದೆ. 

ಇಂಡಸ್ ಎನ್ನುವ ಸಂಸ್ಥೆ ಆರ್’ಟಿಇ  ಅರ್ಜಿ ಸಂಗ್ರಹಿಸಿ, ದೆಹಲಿ ಮೂಲದ ಕಂಪನಿಗೆ ಮಾರಾಟ ಮಾಡುತ್ತದೆ. ಇದಕ್ಕಾಗಿ MOU ಕೂಡಾ  ಮಾಡಿಕೊಂಡಿದೆ. ಮಗುವಿನ ಪೋಷಕರ ಹೆಸರು, ಆಧಾರ್, ಫೋನ್ ನಂಬರ್ ಎಲ್ಲಾ ಮಾಹಿತಿ ಮಾರಾಟ ಮಾಡಲಾಗುತ್ತದೆ.  ಇದಕ್ಕಾಗಿ ಒಂದು ಅರ್ಜಿಗೆ 65 ರೂ ಪಡೆಯಲಾಗುತ್ತಿದೆ.  ಇದರಲ್ಲಿ ಕೆಲ ಬಿಇಓ ಹಾಗೂ ಡಿಡಿಪಿಐ ಕೂಡ ಸೇರಿದ್ದಾರೆ. ಇದನ್ನ ಪತ್ತೆ ಹಚ್ಚಲು ಸರ್ಕಾರ ತನಿಖೆ ನಡೆಸಬೇಕು. ಇದನ್ನ ಗಂಭೀರವಾಗಿ ಪರಿಗಣಿಸಿ ಸಿಐಡಿ ಅಥವಾ ಸಿಬಿಐಗೆ ನೀಡುವಂತೆ  ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಒತ್ತಾಯಪಡಿಸಿದ್ದಾರೆ. 

 ಮಕ್ಕಳ ಪೋಷಕರ ಮಾಹಿತಿಯನ್ನ ಗೌಪ್ಯವಾಗಿ ಕಾಪಾಡಬೇಕಿತ್ತು. ಆದರೆ ಹಣದ ಆಸೆಗೆ ಮಾಹಿತಿಯನ್ನೇ ಮಾರಾಟ ಮಾಡಲಾಗುತ್ತದೆ. ಬೆಂಗಳೂರು ಉತ್ತರ ಹಾಗೂ ದಕ್ಷಿಣ ವಲಯದಲ್ಲಿ ಅಧಿಕಾರಿಗಳ ಅಂದಾ ದರ್ಬಾರ್ ನಡೆಯುತ್ತಿದೆ.  ಇವರ ವಿರುದ್ಧ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಬೇಕು. ಇಂತ ಶಾಲೆಯಲ್ಲಿ ಮಕ್ಕಳನ್ನ ಸೇರಿಸಿ ಕಡಿಮೆ ದರ ಅಂತ ಕರೆ ಬರುತ್ತಿವೆ. ಅವರಿಗೆ ಪೋಷಕರ ನಂಬರ್ ಎಲ್ಲಿ ದೊರೆಯುತ್ತಿದೆ. ಅರ್.ಟಿ.ಇ ಅಪ್ಲಿಕೇಶನ್ ಹಾಕಿದಾಗಲೇ ಇಂತ ಮಾಹಿತಿ ಸೋರಿಕೆಯಾಗುತ್ತಿದೆ. ಅರ್ಜಿ ಹಾಕಿದವರಿಗೆ ಕರೆ ಮಾಡಿ ನೀವು ಅರ್ಜಿ ಹಾಕಿದ್ದೀರಾ. ಹಣ ಕೊಡಿ ಮಾಡಿಸಿಕೊಡುತ್ತೇವೆ ಅಂತ ಪೋಷಕರಿಂದ ಹಣ ವಸೂಲಿ ಮಾಡಲಾಗುತ್ತಿದೆ.  ಇದನ್ನ ಸರ್ಕಾರ,  ಇಲಾಖೆ ಗಂಭೀರವಾಗಿ ಪರಿಗಣಿಸಬೇಕು.  ಕೂಡಲೇ ಇಂತ ಪ್ರಕರಣವನ್ನ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮನವಿ ಮಾಡಿಕೊಂಡಿದ್ದಾರೆ. 

Follow Us:
Download App:
  • android
  • ios