ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ವಯಂ ಘೋಷಿತ ದೇವ ಮಹಿಳೆಯಿಂದ ಮಸಾಜ ಮಾಡಿಸಿಕೊಳ್ಳುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೖರಲ್ ಆಗಿದೆ. ಅಷ್ಟಕ್ಕೂ ಏನಿದು .. ಸ್ಟೋರಿ ಮುಂದೆ ಓದಿ..

ನವದೆಹಲಿ(ಜು.23) ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಸ್ವಯಂಘೋಷಿತ ದೇವ ಮಹಿಳೆಯೊಬ್ಬರ ಜೊತೆಗಿದ್ದ ಫೋಟೋ ವೈರಲ್​ ಆಗಿದೆ. ಈ ಪೋಟೋವನ್ನ ಮಹಿಳೆಯೇ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ ಎನ್ನಲಾಗಿದೆ.

ದೆಹಲಿಯ ಜಾನಕಿಪುರಿ ಪೊಲೀಸ್​ ಠಾಣೆಯಲ್ಲಿ ಠಾಣಾಧಿಕಾರಿ ಇಂದರ್​ ಲಾಲ್​, ಸ್ವಯಂ ಘೋಷಿತ ದೇವ ಮಹಿಳೆ ನಮಿತಾ ಆಚಾರ್ಯ ಅವರೊಂದಿಗೆ ಇರುವ ಫೋಟೋ ಇದಾಗಿದೆ. ಕುರ್ಚಿಯೊಂದರ ಮೇಲೆ ಕುಳಿತಿರುವ ಪೊಲೀಸ್ ಅಧಿಕಾರಿಯ ತಲೆಯ ಕೂದಲನ್ನು ಮಹಿಳೆ ಮಸಾಜ್ ಮಾಡುತ್ತಿರುವ ದೃಶ್ಯ ಬಿತ್ತರವಾಗಿದೆ.

ಫೋಟೋ ವೖರಲ್ ಆಗುತ್ತಿದ್ದಂತೆ ಇಂದರ್​ ಲಾಲ್​ ಅವರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಇದನ್ನು ಮಹಿಳೆಯ ಆಶೀರ್ವಾದ ಎನ್ನಬೇಕೋ? ಅಥವಾ ಬೇರೆ ರೀತಿಯ ಸಂಬಂಧ ಎಂದು ಕರೆಯಬೇಕೋ? ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ.