ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 200 ವರ್ಷಗಳಷ್ಟು ಹಳೆಯದಾದ ಬೃಹತ್ ಅರಳಿಮರ ಧರೆಗುರುಳಿದೆ.
ಆನೇಕಲ್ (ಅ.15): ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 200 ವರ್ಷಗಳಷ್ಟು ಹಳೆಯದಾದ ಬೃಹತ್ ಅರಳಿಮರ ಧರೆಗುರುಳಿದೆ.
ಬಿದ್ದ ಸಮಯದಲ್ಲಿ ಅಲ್ಲಿ ಯಾರೂ ಇರದೇ ಇದ್ದುದರಿಂದ ಭಾರಿ ಅನಾಹುತ ತಪ್ಪಿದೆ. ಮರ ಬಿದ್ದ ರಭಸಕ್ಕೆ 2 ವಿದ್ಯುತ್ ಕಂಬಗಳು ಮುರಿದಿವೆ. ಮನೆಯೊಂದು ಭಾಗಶಃ ಜಖಂಗೊಂಡಿದೆ.
ಎಲಕ್ಟ್ರಾನಿಕ್ ಸಿಟಿ ಸಮೀಪದ ಚಿಕ್ಕನಾಗಮಂಗಲದಲ್ಲಿ ಘಟನೆ ಈ ಘಟನೆ ನಡೆದಿದೆ. ಮುನೇಶ್ವರ ದೇವಾಲಯದ ಅವರಣದಲಿದ್ದ ಹಳೆಯ ಅರಳಿ ಮರ ಧರೆಗುಳಿದಿದೆ. ಬೆಳಿಗ್ಗೆ ದೇವಾಲಯದಲ್ಲಿ ಹೆಚ್ಚು ಜನ ಸೇರಿದ್ದರು. ಅದೃಷ್ಟವಶಾತ್ ಸಂಜೆ ಮರ ಬಿದ್ದಿದ್ದರಿಂದ ಏನೂ ಅನಾಹುತ ಸಂಭವಿಸಿಲ್ಲ.
(ಸಾಂದರ್ಭಿಕ ಚಿತ್ರ)
