ಒಟ್ಟು 2.80 ಲಕ್ಷ ರೂ. ಹಳೆಯ 500, 1000 ರೂ. ಮುಖಬೆಲೆಯ ನೋಟುಗಳಲ್ಲಿ 1000 ರೂ ಮುಖಬೆಲೆಯ 163 ನೋಟುಗಳು ಮತ್ತು 500 ರೂ. ಮುಖಬೆಲೆಯ 34  ನೋಟುಗಳು ನಕಲಿ ನೋಟುಗಳಿರುವುದು ಕಂಡುಬಂದಿದೆ.

ಚಿಕ್ಕಬಳ್ಳಾಪುರ (ಡಿ.04): ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಕರ್ಣಾಟಕ ಬ್ಯಾಂಕ್ ನಲ್ಲಿ ಖೋಟಾ ನೋಟು ಪತ್ತೆಯಾಗಿದೆ.

ಕಳೆದ ಶುಕ್ರವಾರ ಕರ್ನಾಟಕ ಬ್ಯಾಂಕ್’ಗೆ, ರವಿಂದ್ರನಾಥ್ ಎಂಬ ಹೆಸರಿನಲ್ಲಿ 2.80 ಲಕ್ಷ ರೂ. ಹಣವನ್ನು ಡೆಪಾಸಿಟ್ ಮಾಡಲು ಅನಿಲ್ ಕುಮಾರ್ ಎಂಬಾತನು ಬಂದಿದ್ದನು.

ಹಣ ಡೆಪಾಸಿಟ್ ಮಾಡಿಕೊಳ್ಳುವಾಗ ಬ್ಯಾಂಕ್ ಸಿಬ್ಬಂದಿಗೆ ಶಾಕ್ ಆಯ್ತು. ತಂದಿದ್ದ ಹಣದಲ್ಲಿ 1.80 ಲಕ್ಷ ರೂ. ಹಣ ನಕಲಿ ನೋಟುಗಳಿಂದ ಕೂಡಿತ್ತು. 

ಒಟ್ಟು 2.80 ಲಕ್ಷ ರೂ. ಹಳೆಯ 500, 1000 ರೂ. ಮುಖಬೆಲೆಯ ನೋಟುಗಳಲ್ಲಿ 1000 ರೂ ಮುಖಬೆಲೆಯ 163 ನೋಟುಗಳು ಮತ್ತು 500 ರೂ. ಮುಖಬೆಲೆಯ 34 ನೋಟುಗಳು ನಕಲಿ ನೋಟುಗಳಿರುವುದು ಕಂಡುಬಂದಿದೆ.

ಆದರೆ ಬ್ಯಾಂಕ್ ಅಧಿಕಾರಿಗಳು ಅಂದೇ ಪೊಲೀಸರಿಗೆ ದೂರು ನೀಡದೇ, ನಿನ್ನೆ ಸಂಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

(ಸಾಂದರ್ಭಿಕ ಚಿತ್ರ)