ಹುಬ್ಬಳ್ಳಿ(ನ.2): ರೌಡಿಶೀಟರೊಬ್ಬ ಠಾಣೆಯಲ್ಲೇ ಸರ್ಕಲ್ ಇನ್ಸ್‌ಪೆಕ್ಟರ್ ಗೆ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಹುಬ್ಬಳ್ಳಿ ಕೇಶ್ವಾಪುರ ಸರ್ಕಲ್  ಇನ್ಸ್‌ಪೆಕ್ಟರ್ ಶ್ಯಾಮರಾವ್ ಸಜ್ಜನ್ ಮೇಲೆ. ರೌಡಿಶೀಟರ್ ಶಿವಕುಮಾರ್ ಸುಬ್ರಹ್ಮಣ್ಯ ಎಂಬುವನಿಂದ ಹಲ್ಲೆಗೆ ಯತ್ನ ನಡೆದಿದೆ. ರೌಡಿ ಶೀಟರ್ ಶಿವಕುಮಾರ್  ಸಹಚರ ರಾಜಾ ಪಾಟೀಲ್ ಎಂಬುವವನ್ನು ನಿನ್ನೆ ರಾತ್ರಿ ಹಣಕಾಸು ಪ್ರಕರಣ ಸಂಬಂಧ ಬಂಧಿಸಿ ಕೇಶ್ವಪುರ ಪೋಲೀಸರು  ಠಾಣೆಗೆ ಕರೆತಂದಿದ್ದರು.ಈ ವೇಳೆ ಠಾಣೆಗೆ ನುಗ್ಗಿ ರೌಡಿ ಶೀಟರ್ ಶಿವಕುಮಾರ್ ತನ್ನ ಸಹಚರ ರಾಜಾ ಪಾಟೀಲ್ ವಿಚಾರಣೆಗೆ ಅಡ್ಡಿಪಡಿಸಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಗೆ ಯತ್ನಿಸಿದ್ದಾನೆ. ಸಾಲದ್ದಕ್ಕೆ ನಾನು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಬೆಂಬಲಿಗ ಎಂದು ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿ ಬೆದರಿಕೆ ಒಡ್ಡಿದ್ದಾನೆ.ಈ ವೇಳೆ ರೌಡಿ ಶೀಟರ್ ಶಿವಕುಮಾರನನ್ನು ಕೇಶ್ಬಾಪುರ ಪೊಲೀಸರು ಬಂಧಿಸಿದ್ದಾರೆ. ಸದ್ಯಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ ಆರೋಪದ ಪ್ರಕರಣ ದಾಖಲಿಸಿದ್ದು ಆರೋಪಿ ಶಿವಕುಮಾರನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.