ಸ್ವಯಂಘೋಷಿತ ದೇವ ಮಹಿಳೆ ರಾಧೆ ಮಾ ಅಲಿಯಾಸ್‌ ಸುಖ್ವಿಂದರ್ ಖೌರ್‌ಗೆ ಪೊಲೀಸ್ ಠಾಣೆಯಲ್ಲಿ ರಾಜೋಪಚಾರ ಮಾಡಿ ಗೌರವಿಸಲಾಗಿದ್ದು ಇದೀಗ ವೈರಲ್ ಆಗಿದೆ.
ನವದೆಹಲಿ (ಅ.05): ಸ್ವಯಂಘೋಷಿತ ದೇವ ಮಹಿಳೆ ರಾಧೆ ಮಾ ಅಲಿಯಾಸ್ ಸುಖ್ವಿಂದರ್ ಖೌರ್ಗೆ ಪೊಲೀಸ್ ಠಾಣೆಯಲ್ಲಿ ರಾಜೋಪಚಾರ ಮಾಡಿ ಗೌರವಿಸಲಾಗಿದ್ದು ಇದೀಗ ವೈರಲ್ ಆಗಿದೆ.
ಕೌಟುಂಬಿಕ ಹಿಂಸೆ ಪ್ರಕರಣವೊಂದರಲ್ಲಿ ಕೈವಾಡ ಆರೋಪ ಹೊತ್ತಿರುವ ರಾಧೆ ಮಾರನ್ನು ತನಿಖೆಗೆಂದು ಠಾಣೆಗೆ ಕರೆಸಲಾಗಿತ್ತು. ತನಿಖೆಗೆಂದು ರಾಧೆ ಮಾ ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣೆಗೆ ಬಂದಾಗ ಎಸ್ಎಚ್ಒ ಸಂಜಯ ಶರ್ಮಾ ತಮ್ಮ ಸೀಟಿನಲ್ಲಿ ಕುಳ್ಳಿರಿಸಿ ರಾಧೇ ಮಾ ಗೌರವಿಸಿದರು. ರಾಧೆ ಮಾ ಪಕ್ಕದಲ್ಲೇ ನಿಂತು ಕೈಮುಗಿದು, ಕೆಂಪು ಶಲ್ಯ ಹೊದಿಸಿ ಠಾಣಾಧಿಕಾರಿ ಗೌರವಿಸಿದರು. ಎಎನ್ಐ ರೆಕಾರ್ಡ್ ಮಾಡಿದ ಈ ವಿಡಿಯೋ ಈಗ ದೇಶಾದ್ಯಂತ ವೈರಲ್ ಆಗಿದೆ.
ಇದೀಗ ಸಂಜಯ್ ಶರ್ಮಾರನ್ನು ಅಮಾನತುಗೊಳಿಸಲಾಗಿದೆ.
