ನವದೆಹಲಿ[ಅ.03]: ಅಮೆರಿಕದ ಹೂಸ್ಟನ್‌ನಲ್ಲಿ ಇತ್ತೀಚೆಗೆ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಸೇರಿದ್ದ ಭಾರೀ ಜನ ಸಮೂಹ ಕಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೂ ಬೆರಗಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ, ಹೌಡಿ ಮೋದಿ ಕಾರ್ಯಕ್ರಮದ ಕುರಿತಾಗಿ ಮೋದಿ ಹಾಗೂ ಟ್ರಂಪ್‌ ನಡುವೆ ಒಂದು ಕುತೂಹಕಾರಿಯಾದ ಸರಣಿ ಮಾತುಕತೆಯೇ ನಡೆದಿದೆ ಎಂಬ ಮಾಹಿತಿಯನ್ನು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಇಷ್ಟುದೊಡ್ಡ ಕಾರ‍್ಯಕ್ರಮ ಹೇಗೆ ನಿಭಾಯಿಸ್ತೀರಿ:

ನೀವು ಎಷ್ಟುದಿನಕ್ಕೊಮ್ಮೆ ಇಂಥ ದೊಡ್ಡ ಮೀಟಿಂಗ್‌ ಮಾಡ್ತೀರಾ? ಎಂಬ ಅಚ್ಚರಿಯ ಪ್ರಶ್ನೆಗಳನ್ನು ನರೇಂದ್ರ ಮೋದಿ ಅವರಿಗೆ ಟ್ರಂಪ್‌ ಕೇಳಿದ್ದರು. ಈ ವೇಳೆ ಇಂಥ ದೊಡ್ಡ ಕಾರ್ಯಕ್ರಮಗಳಲ್ಲಿ ಪ್ರತೀ ವಾರವೂ ಭಾಗಿಯಾಗುತ್ತಿರುತ್ತೇನೆ ಮತ್ತು ಭಾರತದಲ್ಲಿ ಇದೆಲ್ಲಾ ಸಾಮಾನ್ಯ ಎಂದು ಟ್ರಂಪ್‌ ಪ್ರಶ್ನೆಗೆ ಮೋದಿ ಉತ್ತರಿಸಿದ್ದರು ಎಂದು ಈ ಬೆಳವಣಿಗೆ ಬಗ್ಗೆ ತಿಳಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಮೋದಿ ಉತ್ತರದಿಂದ ಮತ್ತಷ್ಟುಆಶ್ಚರ್ಯಚಕಿತಗೊಂಡ ಟ್ರಂಪ್‌ ಹಾಗಿದ್ದರೆ, ಪ್ರತೀ ಬಾರಿ ಅಮೆರಿಕ ಪ್ರವಾಸದ ಸಂದರ್ಭದಲ್ಲಿಯೂ ಇಂಥದ್ದೇ ಬೃಹತ್‌ ಪ್ರಮಾಣದ ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಿದ್ದೀರಿಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ, ಯಾವಾಗಲೂ ಅಲ್ಲ. ಆದರೆ, ಸ್ಯಾನ್‌ಜೋಸ್‌ ಹಾಗೂ ಮ್ಯಾಡಿಸನ್‌ ಸ್ವೆ$್ಕೕರ್‌ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದ ಕಾರ್ಯಕ್ರಮಗಳನ್ನು ಮೋದಿ ಅವರು ಉದಾಹರಿಸಿದ್ದರು.

ಫೋಟೋ ಕಚೇರಿಯಲ್ಲಿಡಿ:

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮೋದಿ ಹಾಗೂ ಟ್ರಂಪ್‌ ಅವರು ಭಾಗಿಯಾಗಿ ಫೋಟೋಗೆ ಪೋಸ್‌ ನೀಡಿದ್ದು, ಈ ಕುರಿತಾದ ಒಂದು ಫೋಟೋವನ್ನು ಮೋದಿ ಅವರು ಟ್ರಂಪ್‌ಗೆ ಸೆ.24ರಂದು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋವನ್ನು ಅಧ್ಯಕ್ಷರ ಅಧಿಕೃತ ನಿವಾಸ ಓವಲ್‌ನಲ್ಲಿರುವ ಶ್ವೇತಭವನದಲ್ಲಿಡುವಂತೆ ತಮ್ಮ ಸಿಬ್ಬಂದಿಗೆ ಟ್ರಂಪ್‌ ಸೂಚನೆ ನೀಡಿದ್ದಾರಂತೆ.