ಈ ಹಿನ್ನೆಲೆಯಲ್ಲಿ ಆಧಾರ್ ಮಾಹಿತಿಯನ್ನು ಯಾರೂ ಕದಿಯದಂತೆ ಸುರಕ್ಷಿತವಾಗಿಡಲು ಆಧಾರ್ ಪ್ರಾಧಿಕಾರವು ತನ್ನ ವೆಬ್‌'ಸೈಟ್‌'ನಲ್ಲಿ ಲಾಕ್ ಮಾಡುವ ಅವಕಾಶ ಕಲ್ಪಿಸಿದೆ.

ನವದೆಹಲಿ(ಜೂ.28): ಇತ್ತೀಚೆಗೆ ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಯ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಆಧಾರ್ ಮಾಹಿತಿ ದುರ್ಬಳಕೆ ಆಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ.

ಈ ಹಿನ್ನೆಲೆಯಲ್ಲಿ ಆಧಾರ್ ಮಾಹಿತಿಯನ್ನು ಯಾರೂ ಕದಿಯದಂತೆ ಸುರಕ್ಷಿತವಾಗಿಡಲು ಆಧಾರ್ ಪ್ರಾಧಿಕಾರವು ತನ್ನ ವೆಬ್‌'ಸೈಟ್‌'ನಲ್ಲಿ ಲಾಕ್ ಮಾಡುವ ಅವಕಾಶ ಕಲ್ಪಿಸಿದೆ.

ಆಧಾರ್ ವೆಬ್‌'ಸೈಟ್‌'ಗೆ ಹೋಗಿ ಆಧಾರ್ ಸಂಖ್ಯೆ, ಬಳಿಕ ಸೆಕ್ಯುರಿಟಿ ಕೋಡ್ ಹಾಗೂ ಕ್ಯಾಪ್ಚಾ ದಾಖಲಿಸಬೇಕು. ಆಗ ಆಧಾರ್‌'ನಲ್ಲಿ ನೋಂದಣಿಯಾದ ಮೊಬೈಲ್‌'ಗೆ ಒಂದು ಒಟಿಪಿ ಸಂಕೇತ ಸಂಖ್ಯೆ ಬರುತ್ತದೆ. ಆ ಸಂಕೇತ ಸಂಖ್ಯೆಯನ್ನು ಬಳಿಕ ವೆಬ್‌'ನಲ್ಲಿ ದಾಖಲಿಸಬೇಕು. ಆಗ ಆಧಾರ್ ಮಾಹಿತಿ ತನ್ನಿಂತಾನೇ ‘ಲಾಕ್’ ಆಗುತ್ತದೆ.

ಇನ್ನು ಆಧಾರ್ ‘ಅನ್‌ಲಾಕ್’ ಮಾಡಬೇಕೆಂದರೆ ಕೂಡ ಈ ಮೇಲ್ಕಾಣಿಸಿದ ವಿಧಾನವನ್ನೇ ಅನುಸರಿಸಿ ಬೀಗ ತೆರೆಯಬಹುದು.

ಲಾಕ್ ಮಾಡುವ ವಿಧಾನ:

https://resident.uidai.gov.in/biometric-lock 

ಆಧಾರ್ ಕಾರ್ಡ್ ನಮೂದಿಸಿ

ಸೆಕ್ಯೂರಿಟಿ ಕೋಡ್/ ಕ್ಯಾಪ್ಚಾ ನಮೂದಿಸಿ

ಒಟಿಪಿ ಪಡೆದು, ಅದನ್ನು ನಮೂದಿಸಿ

ಆಧಾರ್ ಲಾಕ್ ಮಾಡಿ