ಪ್ರತೀ ನೋಟಿಗೆ 2.87-3.77 ರೂಪಾಯಿ ಹಣ ವೆಚ್ಚವಾಗುತ್ತದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ತಿಳಿಸಿದ್ದಾರೆ.
ನವದೆಹಲಿ(ಮಾ. 15): ನೋಟುಗಳನ್ನು ಮುದ್ರಿಸಲು ಸರಕಾರಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಕುತೂಹಲ ನಮ್ಮೆಲ್ಲರಿಗೆ ಒಮ್ಮೆಯಾದರೂ ಬಂದುಹೋಗಿರುತ್ತದೆ. ಈಗ ಹೊಸದಾಗಿ ಬಿಡುಗಡೆಯಾಗಿರುವ 500 ಮತ್ತು 2000 ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬುದಕ್ಕೆ ಸರಕಾರವೇ ಉತ್ತರ ನೀಡಿದೆ. ಪ್ರತೀ ನೋಟಿಗೆ 2.87-3.77 ರೂಪಾಯಿ ಹಣ ವೆಚ್ಚವಾಗುತ್ತದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
ಹೊಸ 500 ಮುಖಬೆಲೆಯ ಒಂದು ನೋಟಿನ ಮುದ್ರಣಕ್ಕೆ 2.87ದಿಂದ 3.09 ರೂಪಾಯಿ ವೆಚ್ಚವಾಗುತ್ತದೆ. 2000 ರೂ ಮುಖಬೆಲೆಯ ನೋಟಿಗೆ 3.54ರಿಂದ 3.77 ರೂ ಖರ್ಚಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
