ಟ್ರೋಲ್ ಗೂಂಡಾಗಿರಿ ವಿರುದ್ಧ ನಟ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ನ.23): ಟ್ರೋಲ್ ಗೂಂಡಾಗಿರಿ ವಿರುದ್ಧ ನಟ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರೋಲ್ ಗೂಂಡಾಗಿರಿ ವಿರುದ್ಧ #just asking ಹೆಸರಲ್ಲಿ ನನ್ನ ಹೋರಾಟ ಮುಂದುವರೆಯುತ್ತದೆ. ಯಾವುದೇ ಹೇಳಿಕೆಗಳನ್ನ ಕೊಟ್ಟರು, ಟ್ರೋಲ್ ಮೂಲಕ ಹತ್ತಿಕ್ಕಲಾಗುತ್ತಿದೆ. ಇದು ಒಂದು ರೀತಿಯ ಗೂಂಡಾ ಪ್ರವೃತ್ತಿ ಎಂದು ಪ್ರಕಾಶ್ ರೈ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ನನ್ನ ರಿಯಲ್ ಲೈಫ್'ನಲ್ಲೂ ಖಳನಾಯಕ ಅಂತ ಕರೆಯೋದಕ್ಕೆ ಶುರು ಮಾಡಿದ್ದಾರೆ. ನೀನು ನಟನೇ ಅಲ್ಲ ತಮಿಳುನಾಡಿಗೆ ಹೋಗು ಅಂತಾರೆ. ಪದ್ಮಾವತಿ ಚಿತ್ರದ ನಟಿ ದೀಪಿಕಾ ಮೂಗು ಕತ್ತರಿಸ್ತೀವಿ ಅಂತಾರೆ. ಇಂತಹ ಟ್ರೋಲ್ ವಿರುದ್ಧ ನಾನು ಧ್ವನಿ ಎತ್ತಬೇಕು ಅಂದುಕೊಂಡಿದ್ದೇನೆ. #Just asking ಹೆಸರಿನಲ್ಲಿ ನನ್ನ ಪ್ರತಿಭಟನೆ ಶುರುವಾಗಲಿದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ವಿರುದ್ಧ ನಟ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಪ್ರತಾಪ್ ಸಿಂಹ್'ಗೆ ಲೀಗಲ್ ನೋಟೀಸ್ ಕಳುಹಿಸುತ್ತಿದ್ದೇನೆ. ಇದು ಯಾವುದೇ ಪಕ್ಷದ ವಿರುದ್ಧ ಅಲ್ಲ, ಕೇವಲ ವ್ಯಕ್ತಿಯ ವಿರುದ್ಧ ಅಷ್ಟೇ. ನನ್ನ ಮಗನ ಸಾವನ್ನು ಅಣಕ ಮಾಡಿ ಟ್ರೋಲ್ ಮಾಡಿದ್ರೆ ಹೇಗೆ ಸಹಿಸಿಕೊಳ್ಳೋದು? ನಾವು ಎಲ್ಲಿಗೆ ತಲುಪಿದ್ದೀವಿ? ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.