ದೇಶದ ಅತಿ ದೊಡ್ಡ ಬ್ಯಾಂಕ್ ಆದ ಎಸ್ ಬಿಐ, 2017ರ ಏಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ ಕನಿಷ್ಠ ಶಿಲ್ಕು (ಬ್ಯಾಲೆನ್ಸ್) ನಿರ್ವಹಿಸದ ಗ್ರಾಹಕರಿಂದ ಪಡೆದ ಶುಲ್ಕದಿಂದ 1,771 ಕೋಟಿ ಸಂಗ್ರಹಿಸಿದೆ. ಇದು ಜುಲೈ- ಸೆಪ್ಟೆಂಬರ್ ತ್ರೈಮಾಸಿಕದ ಅವಧಿಯ 1,581 ಕೋಟಿ ನಿವ್ವಳ ಲಾಭಕ್ಕಿಂತಲೂ ಅಧಿಕವಾಗಿದೆ.
ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆದ ಎಸ್ ಬಿಐ, 2017ರ ಏಪ್ರಿಲ್ನಿಂದ ನವೆಂಬರ್ ಅವಧಿಯಲ್ಲಿ ಕನಿಷ್ಠ ಶಿಲ್ಕು (ಬ್ಯಾಲೆನ್ಸ್) ನಿರ್ವಹಿಸದ ಗ್ರಾಹಕರಿಂದ ಪಡೆದ ಶುಲ್ಕದಿಂದ 1,771 ಕೋಟಿ ಸಂಗ್ರಹಿಸಿದೆ.
ಇದು ಜುಲೈ- ಸೆಪ್ಟೆಂಬರ್ ತ್ರೈಮಾಸಿಕದ ಅವಧಿಯ 1,581 ಕೋಟಿ ನಿವ್ವಳ ಲಾಭಕ್ಕಿಂತಲೂ ಅಧಿಕವಾಗಿದೆ.
ಇನ್ನು ಕಳೆದ ಒಂದು ದಿನದ ಹಿಂದೆಯಷ್ಟೇ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿತ್ತು. ಇದರಿಂದ ಸಾಲ ಪಡೆದುಕೊಂಡ ಗ್ರಾಹಕರಿಗೆ ಒಂದು ರೀತಿಯಾದ ಅನುಕೂಲವನ್ನು ಒದಗಿಸಿತ್ತು.
ಇದೀಗ ಕನಿಷ್ಟ ಬ್ಯಾಲೆನ್ಸ್ ಗ್ರಾಹಕರಿಗೆ ವಿಧಿಸಿದ ದಂಡದ ಹಣದಿಂದ ಬ್ಯಾಂಕ್’ಗೆ ಹೆಚ್ಚು ಪ್ರಮಾಣದಲ್ಲಿ ಲಾಭವಾಗಿದೆ.
