ಡಿಜಿಟಲ್ ಕರೆನ್ಸಿ ಬಿಟ್‌ಕಾಯಿನ್‌ನಲ್ಲಿ ಪರೋಕ್ಷ ಹೂಡಿಕೆ ಮೂಲಕ ಕೆಲವೇ ದಿನಗಳಲ್ಲಿ ಹೆಚ್ಚು ಕಡಿಮೆ 100 ಕೋಟಿ ರು. ಹಣ ಮಾಡಿಕೊಂಡಿದ್ದ ನಟ ಅಮಿತಾಭ್ ಬಚ್ಚನ್‌ರ ಆಸ್ತಿ ಅದೇ ವೇಗದಲ್ಲಿ ಕರಗಿದೆ.

ನವದೆಹಲಿ (ಡಿ.25): ಡಿಜಿಟಲ್ ಕರೆನ್ಸಿ ಬಿಟ್‌ಕಾಯಿನ್‌ನಲ್ಲಿ ಪರೋಕ್ಷ ಹೂಡಿಕೆ ಮೂಲಕ ಕೆಲವೇ ದಿನಗಳಲ್ಲಿ ಹೆಚ್ಚು ಕಡಿಮೆ 100 ಕೋಟಿ ರು. ಹಣ ಮಾಡಿಕೊಂಡಿದ್ದ ನಟ ಅಮಿತಾಭ್ ಬಚ್ಚನ್‌ರ ಆಸ್ತಿ ಅದೇ ವೇಗದಲ್ಲಿ ಕರಗಿದೆ. ಇತ್ತೀಚಿನ ದಿನಗಳಲ್ಲಿ ಬಿಟ್‌ಕಾಯಿನ್ ಮೌಲ್ಯ ಕಂಡುಕೇಳರಿಯದ ರೀತಿಯಲ್ಲಿ ಏರಿದ ಕಾರಣ, ಅಮಿತಾಭ್ ಹೂಡಿಕೆ ಮಾಡಿದ್ದ ಸಿಂಗಾಪುರ ಮೂಲದ ಕಂಪನಿಯ ಷೇರುಮೌಲ್ಯವೂ ಗಗನಕ್ಕೇರಿತ್ತು.

ಹೀಗಾಗಿ ಬಚ್ಚನ್‌ನ ಹೂಡಿಕೆ ಮೌಲ್ಯ ಅಂದಾಜು 100 ಕೋಟಿ ರು.ತಲುಪಿತ್ತು. ಆದರೆ ಕಳೆದೊಂದು ವಾರದಲ್ಲಿ ಬಿಟ್‌ಕಾಯಿನ್ ಮೌಲ್ಯ ಏಕಾಏಕಿ ಕುಸಿದಿದೆ. ಹೀಗಾಗಿ ಬಚ್ಚನ್‌ರ ಹೂಡಿಕೆ ಮೌಲ್ಯವೂ ಅದೇ ವೇಗದಲ್ಲಿ ಕುಸಿತ ಕಂಡಿದೆ.