ರಾಮ ಮಂದಿರ ನಿರ್ಮಾಣಕ್ಕೆ ಸುನ್ನಿ ಸಮುದಾಯದ ಬೆಂಬಲ ಕೋರಿದ ಕೇಂದ್ರ ಸಚಿವ

First Published 4, Feb 2018, 5:47 PM IST
Hope Sunnis Too Will Back Ram Temple In Ayodhya
Highlights

ರಾಮ ಮಂದಿರ ನಿರ್ಮಾಣಕ್ಕೆ ಸುನ್ನಿ ಸಮುದಾಯದ ಬೆಂಬಲ ಕೋರಿದ ಕೇಂದ್ರ ಸಚಿವ

ಥಾಣೆ(ಫೆ.04): ಸುನ್ನಿ ಮುಸ್ಲಿಂ ಸಮುದಾಯ ಬೆಂಬಲ ನೀಡುವ ಪ್ರಸ್ತಾಪದ ನಂತರ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಶಿಯಾ ಸಮುದಾಯದ ಬೆಂಬಲವನ್ನು ನಿರೀಕ್ಷಿಸಿದ್ದಾರೆ.

ಮಹಾರಾಷ್ಟ್ರದ ಥಾಣೆಯಲ್ಲಿ 25ನೇ ರಾಷ್ಟ್ರೀಯ ಕವಿ ಸಮ್ಮೇಳನ ಉದ್ಘಾಟಿಸಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಈಗಾಗಲೇ ಶಿಯಾ ಸಮುದಾಯದವರು ಬೆಂಬಲ ನೀಡಿದ್ದಾರೆ. ಈ ಕಾರ್ಯಕ್ಕೆ ಸುನ್ನಿ ಸಮುದಾಯ ಕೂಡ ಬೆಂಬಲ ನೀಡುವ ಭರವಸೆಯಿದೆ ಎಂದು ತಿಳಿಸಿದರು.

ಕಳೆದ ವರ್ಷ ನವಂಬರ್'ನಲ್ಲಿ ಉತ್ತರ ಪ್ರದೇಶದ ಶಿಯಾ ವಕ್ಫ್ ಕೇಂದ್ರ ಮಂಡಳಿ ವಿವಾದಿದ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಿ ಪರಿಹಾರ ಕಂಡಿಕೊಳ್ಳಲು ಸುಪ್ರೀಂ ಕೋರ್ಟ್'ಗೆ ಪ್ರಸ್ತಾವನೆ ಸಲ್ಲಿಸಿತ್ತು. ಕಳೆದ ವರ್ಷ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿತ್ತು. ತದ ನಂತರ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

loader