ದೆಹಲಿಯ ಲಜಪತ್ ನಗರದಲ್ಲಿರುವ ವಕೀಲರನ್ನು ಭೇಟಿ ಮಾಡಲು ಬುರ್ಖಾ ಧರಿಸಿ ಆಗಮಿಸಿದ್ದರು ಎನ್ನಲಾಗುತ್ತಿದೆ .
ನವದೆಹಲಿ(ಸೆ.26): ಅತ್ಯಾಚಾರಿ ಬಾಬಾ ರಾಮ್ ರಹೀಂ ನ ದತ್ತುಪುತ್ರಿ ಹನಿಪ್ರೀತ್ ಸಿಂಗ್ ಇನ್ಸಾನ್ ಬಂಧನ ಭೀತಿಯಿಂದ ಪೊಲೀಸರ ಕಣ್ತಪ್ಪಿಸಿ ತಿರುಗಾಡುತ್ತಿದ್ದು. ಇದೀಗ ದೆಹಲಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹನಿಪ್ರೀತ್ ತಮ್ಮ ವಕೀಲರನ್ನು ಭೇಟಿಯಾಗಲು ದೆಹಲಿಗೆ ಆಗಮಿಸಿದ್ದರು ಎಂದು ಹೇಳಲಾಗಿದೆ. ದೆಹಲಿಯ ಲಜಪತ್ ನಗರದಲ್ಲಿರುವ ವಕೀಲರನ್ನು ಭೇಟಿ ಮಾಡಲು ಬುರ್ಖಾ ಧರಿಸಿ ಆಗಮಿಸಿದ್ದರು ಎನ್ನಲಾಗುತ್ತಿದೆ .ಸಿಸಿಟಿವಿ ವಿಡಿಯೋವೊಂದು ವೈರಲ್ ಆಗಿದ್ದು , ವಿಡಿಯೋದಲ್ಲಿ ಬುರ್ಖಾಧರಿಸಿದ ಮಹಿಳೆಯೊಬ್ಬರು ಲಜಪತ್ ನಗರದಲ್ಲಿರುವ ವಕೀಲರ ಕಚೇರಿಗೆ ತೆರಳುತ್ತಿರುವುದು ಕಂಡುಬಂದಿದೆ. ಈ ಬುರ್ಖಾ ಧರಿಸಿದ ಮಹಿಳೆಯೇ ಹನಿ ಪ್ರೀತ್ ಸಿಂಗ್ ಇರಬಹುದು ಎಂದು ಶಂಕಿಸಲಾಗಿದೆ. ಇನ್ನೂ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನಡೆಸಿದ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ಕಾಯ್ದಿರಿಸಿದೆ.
