ದಿನೇ ದಿನೇ ಬೆಂಗಳೂರು ಸೇರಿದಂತೆ  ರಾಜ್ಯದ ಅನೇಕ ಕಡೆ ರೌಡಿಗಳ ಗುಂಡಾಗಿರಿ,  ಮಹಿಳಾ ದೌರ್ಜನ್ಯ  ಹೆಚ್ಚಾಗುತ್ತಿರುವ  ಹಿನ್ನಲೆ ಇಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸಭೆ ಪೊಲೀಸ್ ಅಧಿಕಾರಿಗಳ ಜತೆ ವಿಕಾಸಸೌಧದಲ್ಲಿ  ಸಭೆ ನಡೆಸಿದರು.

ಬೆಂಗಳೂರು (ಸೆ.09): ದಿನೇ ದಿನೇ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ರೌಡಿಗಳ ಗುಂಡಾಗಿರಿ, ಮಹಿಳಾ ದೌರ್ಜನ್ಯ ಹೆಚ್ಚಾಗುತ್ತಿರುವ ಹಿನ್ನಲೆ ಇಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸಭೆ ಪೊಲೀಸ್ ಅಧಿಕಾರಿಗಳ ಜತೆ ವಿಕಾಸಸೌಧದಲ್ಲಿ ಸಭೆ ನಡೆಸಿದರು.

ನಾನು ಕೇವಲ ಮೊದಲ ಹಂತದ ಅಧಿಕಾರಿಗಳ ಜತೆ ಸಭೆ ನಡೆಸಬಹುದಿತ್ತು ಆದರೆ ನಾನು ಎಲ್ಲಾ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರೋದಕ್ಕೆ ಮುಖ್ಯ ಕಾರಣ ಅಂದರೆ ಎಲ್ಲ ಹಂತದ ಅಧಿಕಾರಿಗಳಿಗೆ ನನ್ನ ಸಂದೇಶ ತಲಪಬೇಕು, ನಾನು ನೀಡುವ ನಿರ್ದೇಶನ ಅನುಷ್ಠಾನ ಆಗಬೇಕು ಇದಕ್ಕೆ ಮಾದ್ಯಮದವರು ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು. ಇನ್ನು ಗೂಂಡಾಗಳನ್ನು ಮಟ್ಟ ಹಾಕಿ ಬೆಂಗಳೂರಿನಲ್ಲಿ ಬಾಲ ಮುಚ್ಚಿಕೊಂಡು ಇರಬೇಕು ಇಲ್ಲಾಂದ್ರೆ ರಾಜ್ಯ ಬಿಟ್ಟು ಹೊಗಲಿ ಎಂದು ಪೊಲೀಸರಿಗೆ ತಾಕಿತು ಮಾಡಿದರು.

ಮಹಿಳೆಯರ ಮೇಲಿನ ಅತ್ಯಾಚಾರ, ಸರಗಳ್ಳತನ ಕಡಿಮೆ ಆಗಬೇಕು. ಬೆಳಗ್ಗೆ 8 ಗಂಟೆಗೆ ವೈನ್ ಶಾಪ್ ಗಳನ್ನು ತೆಗೆಯುತ್ತಾರೆ ಇದಕ್ಕೆ ಅವಕಾಶ ಕೊಡಬೇಡಿ, ಬೆಳಗ್ಗೆ ೧೦ ಗಂಟೆಗೆ ತೆರೆಯಬೇಕು ಅಂತಿದ್ದರೆ ೧೦ ಗಂಟೆಗೇ ತೆಗೆಯಬೇಕೇ ವಿನಃ ಬೇಗ ತೆಗೆಯಬಾರದು. ರಾತ್ರಿ 11 ಗಂಟೆಗೆ ಬಂದ್ ಆಗಬೇಕು. ಬೇಗ ತೆಗೆದರೆ ಓನರ್ ನನ್ನು ವಶಕ್ಕೆ ಪಡೆಯಿರಿ. ರಾತ್ರಿ 11 ಗಂಟೆಗೆ ಬಂದ್ ಮಾಡದಿದ್ದರೂ ಹೀಗೇ ಮಾಡಿ. ಕ್ರೈಂ ಮಾಡುವವರನ್ನ ಹಿಂದೆ ಮುಂದೆ ನೋಡದೆ ಗುಂಡಾ ಕಾಯ್ದೆ ಹಾಕಿ ಎಂದು ರಾಮಲಿಂಗಾರಡ್ಡಿ ಪೊಲೀಸ್'ರಿಗೆ ಖಡಕ್ ಮಾತು ಹೇಳಿದ್ದಾರೆ.

ಇನ್ಸ್ ಪೆಕ್ಟರ್ ಗಳು ಸ್ಟ್ರಿಕ್ಟ್ ಆಗಿದ್ದರೆ ಅಪರಾಧ ಮಾಡುವವರು ಹೆದರುತ್ತಾರೆ. ಮಕ್ಕಳ ಮೇಲಿನ ದೌರ್ಜನ್ಯ ಎಸಗುವವರ ಮೇಲೆ ಫೋಸ್ಕೋ ಕಾಯ್ದೆ ಹಾಕಿ. ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಕಡಿಮೆ ಆಗಬೇಕು ಎಂದು ರಾಮಲಿಂಗಾರಡ್ಡಿ ಹೇಳಿದ್ದಾರೆ.

ನೀವು ತಪ್ಪು ಮಾಡಿದರೆ ಯಾರೇ ಇನ್ ಫ್ಲೂಯೆನ್ಸ್ ಮಾಡಿದರೂ ಬಿಡಲ್ಲ. ನನ್ನ ಹತ್ತಿರ ಯಾರ ಇನ್ ಫ್ಲೂಯೆನ್ಸ್ ಕೂಡ ನಡೆಯಲ್ಲ ಎಂದು ಖಡಕ್ ವಾರ್ನಿಂಗ್ ಮಾಡಿದ್ದಾರೆ.