ಅಮಿತ್ ಷಾ ಕರ್ನಾಟಕಕ್ಕೆ ಬರುವುದರಿಂದ ಉತ್ತರ ಭಾರತ ಸಂಸ್ಕೃತಿ ಆರಂಭ: ರಾಮಲಿಂಗಾ ರೆಡ್ಡಿ

First Published 21, Feb 2018, 10:50 AM IST
Home Minister Slams Amit Shah
Highlights

ಅಮಿತ್ ಷಾ ಕರ್ನಾಟಕಕ್ಕೆ ಬರುತ್ತಿರುವುದರಿಂದ ಉತ್ತರ ಭಾರತದ ಸಂಸ್ಕೃತಿ ಆರಂಭವಾಗುತ್ತಿದೆಯೆಂದು ಗೃಹ ಸಚಿವ  ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. 

ಆನೇಕಲ್ (ಫೆ. 21):  ಅಮಿತ್ ಷಾ ಕರ್ನಾಟಕಕ್ಕೆ ಬರುತ್ತಿರುವುದರಿಂದ ಉತ್ತರ ಭಾರತದ ಸಂಸ್ಕೃತಿ ಆರಂಭವಾಗುತ್ತಿದೆಯೆಂದು ಗೃಹ ಸಚಿವ  ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. 

ಅಮಿತ್ ಷಾ ವಿರುದ್ದ ಮತ್ತೊಮ್ಮೆ ರಾಮಲಿಂಗಾರೆಡ್ಡಿ ಗುಡುಗಿದ್ದಾರೆ.  ಮಂಗಳೂರಿನ ಮಲ್ಪೆ  ಬಳಿ ಬಸ್ ಮೇಲೆ ಕಲ್ಲು ತೂರಾಟ ಘಟನೆಗೆ ಬಿಜೆಪಿಯವರೇ ಕಾರಣವೆಂದು ರಾಮಲಿಂಗಾರೆಡ್ಡಿಯವರು ಬಿಜೆಪಿಗೆ ತಿರುಗು ಬಾಣವಾಗಿಸಿದರು.

ನಲಪಾಡ್  ಘಟನೆ ಬಗ್ಗೆ ಮಾತಾನಾಡಿದ ಗೃಹ ಸಚಿವರು, ಪ್ರಕರಣ ಇದೀಗ ನ್ಯಾಯಾಲಯದಲ್ಲಿದೆಯೆಂದು ಜಾರಿಕೊಂಡರು. ಕಲ್ಕೆರೆ ನಾರಾಯಣಸ್ವಾಮಿ ಪ್ರಕರಣದ ಬಗ್ಗೆ ನಾರಾಯಣಸ್ವಾಮಿಯನ್ನು‌ ಆದಷ್ಟು‌ ಬೇಗ ಬಂಧಿಸುತ್ತೇವೆಂದು  ಭರವಸೆ ನೀಡಿದರು.  ಈ ಪ್ರಕರಣಗಳಿಂದ ಪಕ್ಷಕ್ಕೆ ಇರುಸುಮುರುಸು ಉಂಟಾಗಿದೆಯೆಂದು ರಾಮಲಿಂಗಾರೆಡ್ಡಿ ತಿಳಿಸಿದರು. 

 

loader