' ತಮ್ಮ ಕುಟುಂಬದ ಮೇಲೆ ಹೆಚ್ಚು ಮಾತಾಡ್ತಿದ್ದಾರೆ. ಶೋಭಾ ಕರಂದ್ಲಾಜೆ ನನ್ನ ಹೆಂಡತಿ ಬಗ್ಗೆ ಮಾತಾಡಿದ್ದರು.
ಬೆಂಗಳೂರು(ಡಿ.04): ಸಂಸದ ಪ್ರತಾಪ್ ಸಿಂಹ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ತಂದೆ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಬಗ್ಗೆ ಗೂಂಡಾ ಹೇಳಿಕೆ ವಿವಾದದ ಸ್ಪರೂಪ ಪಡೆದುಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಗುಂಡೂರಾವ್'ಗೆ ಗೂಂಡಾ ಅಂದ್ರೆ ಬಿಜೆಪಿ ಅಧ್ಯಕ್ಷ ಜೈಲಿಗೆ ಹೋಗಿರಲಿಲ್ವಾ? ಬಿಜೆಪಿಯವರ ಬಗ್ಗೆ ಹೇಳ್ತಾ ಹೋದರೆ ಯಾರು ಎಷ್ಟು ಗೂಂಡಾ ಅನ್ನೋದು ಗೊತ್ತಾಗುತ್ತೆ. ಈ ಬಗ್ಗೆ ಮತ್ತೊಮ್ಮೆ ಮಾತನಾಡುತ್ತೇನೆ' ಎಂದು ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ.
ಸಭ್ಯತೆ ಇಲ್ಲದವರ ಹೇಳಿಕೆಗೆ ಏನಂತ ಪ್ರತಿಕ್ರಿಯೆ ಕೊಡೋದು
ಪ್ರತಾಪ್ ಸಿಂಹರವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ' ತಮ್ಮ ಕುಟುಂಬದ ಮೇಲೆ ಹೆಚ್ಚು ಮಾತಾಡ್ತಿದ್ದಾರೆ. ಶೋಭಾ ಕರಂದ್ಲಾಜೆ ನನ್ನ ಹೆಂಡತಿ ಬಗ್ಗೆ ಮಾತಾಡಿದ್ದರು. ಇದೀಗ ಪ್ರತಾಪ್ ಸಿಂಹ ನಮ್ಮ ಕುಟುಂಬದ ಬಗ್ಗೆ ಮಾತಾಡ್ತಿದ್ದಾರೆ. ಸಭ್ಯತೆ ಇಲ್ಲದವರ ಹೇಳಿಕೆಗೆ ಏನಂತ ಪ್ರತಿಕ್ರಿಯೆ ಕೊಡೋದು' ಎಂದು ತಿಳಿಸಿದ್ದಾರೆ.
