ಯೋಗೇಶ್ ಗೌಡ ಕೊಲೆ ಆರೋಪ ಎದುರಿಸುತ್ತಿರುವ ಸಚಿವ ವಿನಯ್ ಕುಲಕರ್ಣಿ ರಕ್ಷಣೆ ಮಾಡಲು ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರ ಬೆನ್ನಿಗೆ ನಿಂತಿದ್ದಾರೆ.
ಬೆಂಗಳೂರು (ನ.26): ಯೋಗೇಶ್ ಗೌಡ ಕೊಲೆ ಆರೋಪ ಎದುರಿಸುತ್ತಿರುವ ಸಚಿವ ವಿನಯ್ ಕುಲಕರ್ಣಿ ರಕ್ಷಣೆ ಮಾಡಲು ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರ ಬೆನ್ನಿಗೆ ನಿಂತಿದ್ದಾರೆ.
ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಧಾರವಾಡಕ್ಕೆ ತೆರಳಿದ್ದಾರೆ. ಹುಬ್ಬಳ್ಳಿಯ ನವೀನ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕೊಲೆಯಾದ ಯೋಗೀಶ್ ಗೌಡ ಪತ್ನಿಯ ಜೊತೆ ಕೆಂಪಯ್ಯ ಸಂಧಾನ ಮಾತುಕತೆ ಪ್ರಯತ್ನ ಮಾಡುತ್ತಿದ್ದಾರೆ.
ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಕೈವಾಡ ಆರೋಪ ಬಲವಾಗಿ ಕೇಳಿ ಬಂದಾಗ ಕಾಂಗ್ರೆಸ್ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿದೆ. ತಮ್ಮ ವಿರುದ್ಧ ತಿರುಗಿ ಬಿದ್ದವರನ್ನು ಸಮಾಧಾನಪಡಿಸಲು ಕೆಂಪಯ್ಯ ಯತ್ನಿಸುತ್ತಿದ್ದಾರೆ. ಕೊಲೆಯಾದ ಯೋಗೀಶ್ ಗೌಡ ಪತ್ನಿ ಕುರುಬ ಸಮುದಾಯಕ್ಕೆ ಸೇರಿದವರು. ಕುರುಬ ಮುಖಂಡರ ಮಧ್ಯಸ್ಥಿಕೆಯಲ್ಲಿ ಮಲ್ಲಮ್ಮರೊಂದಿಗೆ ಸಂಧಾನ ಯತ್ನ ನಡೆಸುತ್ತಿದ್ದಾರೆ. ಮಲ್ಲಮ್ಮರಿಂದಲೇ ವಿನಯ್ ಕುಲಕರ್ಣಿ ಪರವಾಗಿ ಹೇಳಿಕೆ ಕೊಡಿಸಲು ಯತ್ನಿಸುತ್ತಿದ್ದಾರೆ.
