ವಿಭಿನ್ನವಾಗಿ  ಪ್ರತಿಭಟನೆ ಮಾಡುವ ವಾಟಾಳ್​ ನಾಗರಾಜ್​ ಪ್ರಾಣಿಗಳನ್ನೇ ತಮ್ಮ ಗುರುತಾಗಿ ಇಟ್ಟುಕೊಳ್ಳುತ್ತಾರೆ ಹೀಗಾಗಿ ​, ಈ ಬಾರಿಯ ಹೋಳಿಗೆ ಮುಗ್ದ ಪ್ರಾಣಿ ಜತೆ ಹೋಳಿ ಆಚರಿಸಿಕೊಳ್ಳುವ ಮೂಲಕ ಪ್ರಾಣಿಪ್ರಿಯತೆ ಮೆರೆದರು

ಬೆಂಗಳೂರು(ಮಾ.20): ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಕತ್ತೆಗಳ ಜತೆ ಹೋಳಿಹಬ್ಬವನ್ನು ವಿನೂತನವಾಗಿ ಆಚರಿಸಿಕೊಂಡರು. ನಗರದ ಮೈಸೂರು ಬ್ಯಾಂಕ್​ ಸರ್ಕಲ್​ ಬಳಿ ಜೋಡಿ ಕತ್ತೆ, ಆಡುಗಳಿಗೆ ಬಣ್ಣ ಎರಚಿ ಹೋಳಿ ಹಬ್ಬವನ್ನ ಆಚರಿಸಿಕೊಂಡ್ರು. ವಿಭಿನ್ನವಾಗಿ ಪ್ರತಿಭಟನೆ ಮಾಡುವ ವಾಟಾಳ್​ ನಾಗರಾಜ್​ ಪ್ರಾಣಿಗಳನ್ನೇ ತಮ್ಮ ಗುರುತಾಗಿ ಇಟ್ಟುಕೊಳ್ಳುತ್ತಾರೆ ಹೀಗಾಗಿ ​, ಈ ಬಾರಿಯ ಹೋಳಿಗೆ ಮುಗ್ದ ಪ್ರಾಣಿ ಜತೆ ಹೋಳಿ ಆಚರಿಸಿಕೊಳ್ಳುವ ಮೂಲಕ ಪ್ರಾಣಿಪ್ರಿಯತೆ ಮೆರೆದರು.ಜೊತೆಗೆ ನಿಸರ್ಗವನ್ನು ಉಳಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡ ವಾಟಾಳ್​ ಕಾರ್ಯಕರ್ತರು ಸುರಿದ ಬಣ್ಣದಲ್ಲಿ ಮಿಂದೆದ್ದರು.