Asianet Suvarna News Asianet Suvarna News

ಪಂಡಿತರೇ ಕಣಿವೆಗೆ ಬಂದ್ರೆ ಹುಷಾರ್: ಹಿಜ್ಬುಲ್!

ಕಾಶ್ಮೀರ ಕುರಿತಾದ ವಿಶ್ವಸಂಸ್ಥೆ ವರದಿ

ಮಾನವ ಹಕ್ಕು ಉಲ್ಲಂಘನೆ ತಳ್ಳಿಹಾಕಿದ ಸೇನಾ ಮುಖ್ಯಸ್ಥ

ಮಾನವ ಹಕ್ಕುಗಳ ಬಗ್ಗೆ ನಮಗೆ ಪಾಠ ಹೇಳಬೇಡಿ ಎಂದ ರಾವತ್

ಕಾಶ್ಮೀರಿ ಪಂಡಿತರ ಕಣಿವೆ ಪ್ರವೇಶಕ್ಕೆ ಹಿಜ್ಬುಲ್ ವಿರೋಧ

ಬೆಂಗಳೂರು(ಜೂ.27): ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಕುರಿತು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದ ವರದಿಯನ್ನು, ಭಾರತೀಯ ಭೂಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಮಾನವ ಹಕ್ಕುಗಳ ಬಗ್ಗೆ ಭಾರತೀಯ ಸೇನೆಗೆ ವಿಶ್ವಸಂಸ್ಥೆ ಪಾಠ ಹೇಳಿಕೊಡಬೇಕಿಲ್ಲ ಎಂದು ರಾವತ್ ಹರಿಹಾಯ್ದಿದ್ದಾರೆ.

ಈ ಮಧ್ಯೆ ಕಾಶ್ಮೀರದಲ್ಲಿ ಮರಳಿ ಬಂದು ನೆಲೆಸಲು ಕಾಶ್ಮೀರಿ ಪಂಡಿತರು ಪ್ರಯತ್ನ ಮಾಡಿದರೆ, ಕಣಿವೆಯಲ್ಲಿ ಮಾರಣಹೋಮ ನಡೆಯಲಿದೆ ಎಂದು ಹಿಜ್ಬುಲ್ ಮುಜಾಹೀದ್ದೀನ್ ಉಗ್ರಗ್ರಾಮಿ ಸಂಘಟನೆ ಎಚ್ಚರಿಸಿರುವ ಆಡಿಯೋ ಬಿಡುಗಡೆಗೊಂಡಿದೆ.

ಹಿಂದೂಗಳು ಅಮರನಾಥ್ ಯಾತ್ರೆಗೆ ಹೋಗುವುದಕ್ಕೆ ತಮ್ಮ ಅಭ್ಯಂತರವಿಲ್ಲ, ಆದರೆ ಕಣಿವೆಯಲ್ಲಿ ಬಂದು ಶಾಶ್ವತವಾಗಿ ನೆಲೆಸಲು ಪ್ರಯತ್ನ ನಡೆಸಿದರೆ ಅವರನ್ನು ಕೊಲ್ಲಲಾಗುವುದು ಎಂದು ಹಿಜ್ಬುಲ್ ಸಂಘಟನೆ ಎಚ್ಚರಿಕೆ ನೀಡಿದೆ.

ಈ ಕುರಿತು ಇಂದಿನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ನಲ್ಲಿ ನಡೆದ ಚರ್ಚೆಯ ಸಂಪೂರ್ಣ ವಿವರ ನಿಮಗಾಗಿ.. 

Video Top Stories