ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೂ ಮುನ್ನ ವಿವಾದ ಬುಗಿಲೆದ್ದಿದೆ. ದಸರಾಗೂ ಮೊದಲೇ ಭಾರೀ ಅಪಶಕುನವೊಂದು ಕೇಳಿ ಬಂದಿದ್ದು, ಚಾಮುಂಡಿ ದೇವಿಯ ಶಕ್ತಿ ಕುರಿತಾಗಿ ಅನುಮಾನ ವ್ಯಕ್ತವಾಗಿದೆ.  ಈ ನಡುವೆ ಸರ್ಕಾರದ ಲೋಪದಿಂದ ಕಂಟಕ ಎದುರಾಗಲಿದೆಯಾ ಎಂಬ ಪ್ರಶ್ನೆಯೂ ಎದ್ದಿದೆ. ಅಷ್ಕ್ಕೂ ಏನು ಈ ವಿವಾದ? ಇಲ್ಲಿದೆ ವಿವರ

ಮೈಸೂರು(ಆ.19): ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೂ ಮುನ್ನ ವಿವಾದ ಬುಗಿಲೆದ್ದಿದೆ. ದಸರಾಗೂ ಮೊದಲೇ ಭಾರೀ ಅಪಶಕುನವೊಂದು ಕೇಳಿ ಬಂದಿದ್ದು, ಚಾಮುಂಡಿ ದೇವಿಯ ಶಕ್ತಿ ಕುರಿತಾಗಿ ಅನುಮಾನ ವ್ಯಕ್ತವಾಗಿದೆ. ಈ ನಡುವೆ ಸರ್ಕಾರದ ಲೋಪದಿಂದ ಕಂಟಕ ಎದುರಾಗಲಿದೆಯಾ ಎಂಬ ಪ್ರಶ್ನೆಯೂ ಎದ್ದಿದೆ. ಅಷ್ಟಕ್ಕೂ ಏನು ಈ ವಿವಾದ? ಇಲ್ಲಿದೆ ವಿವರ

ಶಕ್ತಿದೇವತೆ ಎಂದೇ ಕರೆಯಲ್ಪಡುವ ದಸರಾ ಅಂಬಾರಿಯ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಶಕ್ತಿ ಇಲ್ಲ. ಅದು ಕೇವಲ ಅರಮನೆಯ ಬೊಂಬೆ ತೊಟ್ಟಿಯಲ್ಲಿರುವ ಬೊಂಬೆ ಮಾತ್ರ. ಸರ್ಕಾರ ಕೇವಲ ತನ್ನ ಸಾಧನೆ ಸಾರುವ ಉತ್ಸವ ಮಾತ್ರ ಮಾಡುತ್ತಿದೆ. ಸಾಂಪ್ರದಾಯಿಕ ಅಥವಾ ಧಾರ್ಮಿಕ ದಸರಾ ಎನ್ನುವುದರಲ್ಲಿ ಅರ್ಥವೇ ಇಲ್ಲ. ಅಂಬಾರಿ ಮೇಲಿನ ದೇವಿಗೆ ಯಾವುದೇ ಪ್ರಾಣ ಪ್ರತಿಷ್ಠಾಪನೆ ಆಗಿಲ್ಲ. ಸಂಪ್ರದಾಯದ ಪ್ರಕಾರ ಪ್ರಾಣ ಪ್ರತಿಷ್ಠಾಪನೆಯನ್ನೇ ಮಾಡಿಲ್ಲ. ಅಂಬಾರಿ ಮೇಲಿನ ಉತ್ಸವ ಮೂರ್ತಿಗೆ ಶಕ್ತಿ ತುಂಬುವ ಕೆಲಸ ಕೂಡ ಆಗಿಲ್ಲ. ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯನ್ನೇ ಮಾಡದೆ ಅಂಬಾರಿ ಉತ್ಸವ ನಡೆಯುತ್ತಿದೆ. ಸಾಂಪ್ರದಾಯಿಕ ದಸರಾವನ್ನು ರಾಜ ವಂಶಸ್ಥರು ಮಾಡುತ್ತಿದ್ದಾರೆ. ಆದ್ರೆ, ಪ್ರಾಣ ಪ್ರತಿಷ್ಠಾಪನೆ ಮಾಡದ ಮೂರ್ತಿ ಉತ್ಸವ ಮೂರ್ತಿಯಾಗಿದೆ. ಈ ಭಾವನೆ ಜನರಲ್ಲೂ ಮೂಡಿದೆ

ಶೆಲ್ವಪಿಲೈ ಅಯ್ಯಂಗಾರ್'

ಈ ಹೇಳಿಕೆ ಕೊಡುವ ಮೂಲಕ ಶೆಲ್ವಪಿಲೈ ಅಯ್ಯಂಗಾರ್'ರವರು ದಸರಾಗೂ ಮುನ್ನವೇ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. ಖ್ಯಾತ ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್ ಕೂಡಾ ಶೆಲ್ವಪಿಲೈ ಅಯ್ಯಂಗಾರ್'ಅವರ ಈ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ. ಇದೀಗ ದಸರಾಗೂ ಮುನ್ನವೇ ಚಾಮುಂಡೇಶ್ವರಿ ದೇವಿಯ ಶಕ್ತಿಯ ವಿಚಾರವಾಗಿ ಶೆಲ್ವಪಿಲೈ ಅಯ್ಯಂಗಾರ್ ನುಡಿದ ಈ ಮಾತುಗಳು ಭಾರೀ ಚರ್ಚೆಯೊಂದಕ್ಕೆ ಅವಕಾಶ ಮಾಡಿಕೊಡುವುದರಲ್ಲಿ ಯಾವ ಅನುಮಾನವೂ ಇಲ್ಲ.