28ರಂದು ನಡೆಯುತ್ತಿದೆ ಹಿಂದುಗಳ ಸಾಮೂಹಿಕ ಮತಾಂತರ

news | Saturday, February 24th, 2018
Suvarna Web Desk
Highlights

ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳ ದಬ್ಬಾಳಿಕೆಗೆ ಬೇಸತ್ತು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ 58 ಕುಟುಂಬಗಳ ಸದಸ್ಯರು ಫೆ.28ರಂದು ಸಾಮೂಹಿಕವಾಗಿ ಬೌದ್ಧಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ.

ಕಲಬುರಗಿ: ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳ ದಬ್ಬಾಳಿಕೆಗೆ ಬೇಸತ್ತು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ 58 ಕುಟುಂಬಗಳ ಸದಸ್ಯರು ಫೆ.28ರಂದು ಸಾಮೂಹಿಕವಾಗಿ ಬೌದ್ಧಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ.

ಈ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ದಲಿತ ಸೇನೆ ರಾಜ್ಯಾಧ್ಯಕ್ಷ ಡಾ.ವಿಠ್ಠಲ ದೊಡ್ಡಮನಿ ಅವರು, ಇದೇ ತಿಂಗಳು ದ್ಯಾವಮ್ಮ ಜಾತ್ರೆಯಲ್ಲಿ ತೇರು ಎಳೆಯುವುದು ಹಾಗೂ ಹರಕೆ ತೀರಿಸುವುದಕ್ಕೆ ಸಂಬಂಧಿಸಿದಂತೆ ದಲಿತರ ಮತ್ತು ಸವರ್ಣಿಯ ನಡುವೆ ಮಾರಾಮಾರಿಯಾಗಿ ಸುಮಾರು ಏಳು ಜನ ದಲಿತರು ಹಾಗೂ ಕೆಲ ಸವರ್ಣಿಯರು ಗಾಯಗೊಂಡಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿರುವ ಸವರ್ಣಿಯರು, ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗ್ರಾಮದಲ್ಲಿ ಈಗಲೂ ದಲಿತರು ಸ್ವಾಭಿಮಾನದಿಂದ ಬದುಕಲು ಆಗುತ್ತಿಲ್ಲ. ಹೀಗಾಗಿ, ಮತಾಂತರಗೊಳ್ಳುತ್ತಿದ್ದೇವೆ. ಅಂದು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನಿಂದ ಬೌದ್ಧ ಭಿಕ್ಷುಗಳು ಆಗಮಿಸಿ ಮತಾಂತರ ಕಾರ್ಯ ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Comments 0
Add Comment

  Related Posts

  Retired Doctor Throws Acid on Man

  video | Thursday, April 12th, 2018

  Police Firest At Notorious Rowdy

  video | Friday, December 15th, 2017

  Retired Doctor Throws Acid on Man

  video | Thursday, April 12th, 2018