ಪಾಕಿಸ್ತಾನ ಸಂಸತ್‌ನ ಮೇಲ್ಮನೆಯ ಸದಸ್ಯರಾಗಿ ಹಿಂದೂ ಸಮುದಾಯದ ದಲಿತ ನಾಯಕಿ ಕೃಷ್ಣಾಕುಮಾರಿ ಕೊಹ್ಲಿ ಆಯ್ಕೆಯಾಗಿದ್ದಾರೆ. ಈ ಮೂಲ ಕ ಹೊಸ ಸಾಧನೆ ಮಾಡಿದ್ದಾರೆ.
ಕರಾಚಿ: ಪಾಕಿಸ್ತಾನ ಸಂಸತ್ನ ಮೇಲ್ಮನೆಯ ಸದಸ್ಯರಾಗಿ ಹಿಂದೂ ಸಮುದಾಯದ ದಲಿತ ನಾಯಕಿ ಕೃಷ್ಣಾಕುಮಾರಿ ಕೊಹ್ಲಿ ಆಯ್ಕೆಯಾಗಿದ್ದಾರೆ. ಈ ಮೂಲ ಕ ಹೊಸ ಸಾಧನೆ ಮಾಡಿದ್ದಾರೆ.
ಕೃಷ್ಣಾ ಕುಮಾರಿ ಅವರನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಲ್ಪ ಸಂಖ್ಯಾತರ ಕೋಟಾದಡಿ ಟಿಕೆಟ್ ನೀಡಿ ಆಯ್ಕೆ ಮಾಡಿದೆ. ಪಾಕ್ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಕೃಷ್ಣಾ ಆಯ್ಕೆ ಪ್ರಮುಖ ಮೈಲುಗಲ್ಲಾಗಲಿದೆ ಎಂದೇ ಬಣ್ಣಿಸಲಾಗು ತ್ತಿದೆ.
ಸಿಂಧ್ ಪ್ರಾಂತ್ಯದ ಥಾರ್ ಪ್ರದೇಶಕ್ಕೆ ಸೇರಿದ ಕೃಷ್ಣಾ 16ನೇ ವಯಸ್ಸಿನಲ್ಲಿಯೇ ವಿವಾಹವಾದರೂ, ಬಳಿಕ ವಿದ್ಯಾಭ್ಯಾಸ ಮುಂದುವರೆಸಿ, 2013ರಲ್ಲಿ ಪದವಿ ಪಡೆದು ನಂತರ ಪಿಪಿಪಿ ಜೊತೆ ಸೇರಿ ಹಲವು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡರು.
