ಟಿಪ್ಪು ಬಗ್ಗೆ ಅವಹೇಳನಕಾರಿ ಭಾಷಣ; ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ; ಬಂಧನ ಖಂಡಿಸಿ ನಾಳೆ ಕೊಡಗು ಬಂದ್ 

ಕೊಡಗು (ನ. 13) : ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ಖಂಡಿಸಿ ನಾಳೆ ಒಂದು ಗಂಟೆ ಕಾಲ ಕೊಡಗು ಬಂದ್ ಗೆ ಕರೆ ನೀಡಲಾಗಿದೆ. 

ಟಿಪ್ಪು ಜಯಂತಿ ದಿನ ಗೋಣಿಕೊಪ್ಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತೋಷ್ ತಮ್ಮಯ್ಯ ಅವಹೇಳನಕಾರಿ ಭಾಷಣ ಮಾಡಿರುವ ಆರೋಪ ಹೊತ್ತಿದ್ದು ನಿನ್ನೆ ತಡರಾತ್ರಿ ಅವರನ್ನು ಬಂಧಿಸಲಾಗಿದೆ. 

ಟಿಪ್ಪು ಜಯಂತಿ ವಿರೋಧಿ ಲೇಖನ: ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ

ಸಂತೋಷ್ ಬಂಧನ ಖಂಡಿಸಿ ನಾಳೆ ಮಧ್ಯಾಹ್ಯ 12 ರಿಂದ 1 ಗಂಟೆವರೆಗೆ ಒಂದು ಗಂಟೆ ಕಾಲ ಹಿಂದೂ ಸುರಕ್ಷಾ ವೇದಿಕೆ ಬಂದ್ ಗೆ ಕರೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಕೊಡವರ ವಿರುದ್ದ ಅವಹೇಳನಕಾರಿ ಮಾತನಾಡಿದ ಅಸೀಫ್ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.