ವಯಸ್ಸಾದ ಹೆತ್ತವರಿಂದ ಮಗ​ನನ್ನು ದೂರ ಮಾಡಲು ಯತ್ನಿಸಿದರೆ, ಅಂತಹ ಪತ್ನಿಗೆ ವಿಚ್ಛೇದನ ನೀಡಬ​ಹುದು ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಈ ಮೂಲಕ, ಮದುವೆಯಾದ ಬಳಿಕ ಪುತ್ರ ತಮ್ಮಿಂದ ದೂರವಾಗುತ್ತಾನೆ ಎಂಬ ಪೋಷಕರ ಆತಂಕವನ್ನೂ ನ್ಯಾಯಾಲಯ ದೂರ ಮಾಡಿದೆ. 

ನವದೆಹಲಿ (ಅ.08): ಪತ್ನಿಯರೇ ಹುಷಾರ್‌! ನಿಮ್ಮ ಪತಿ​ಯನ್ನು ಅವರ ಹೆತ್ತವರಿಂದ ದೂರ ಮಾಡಬೇಕೆಂಬ ಸಣ್ಣ ಯೋಚನೆ​ಯನ್ನೂ ನೀವಿನ್ನು ಮಾಡುವಂತಿಲ್ಲ. ಅಂತಹ ಪ್ರಯತ್ನವನ್ನೇನಾದರೂ ಮಾಡಿದಲ್ಲಿ, ನಿಮ್ಮ ಪತಿ ನಿಮಗೆ ವಿಚ್ಛೇದನ ನೀಡಬಹುದು. 

ವಯಸ್ಸಾದ ಹೆತ್ತವರಿಂದ ಮಗ​ನನ್ನು ದೂರ ಮಾಡಲು ಯತ್ನಿಸಿದರೆ, ಅಂತಹ ಪತ್ನಿಗೆ ವಿಚ್ಛೇದನ ನೀಡಬ​ಹುದು ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಈ ಮೂಲಕ, ಮದುವೆಯಾದ ಬಳಿಕ ಪುತ್ರ ತಮ್ಮಿಂದ ದೂರವಾಗುತ್ತಾನೆ ಎಂಬ ಪೋಷಕರ ಆತಂಕವನ್ನೂ ನ್ಯಾಯಾಲಯ ದೂರ ಮಾಡಿದೆ. 

1992ರಲ್ಲಿ ವಿವಾಹವಾಗಿದ್ದ ಕರ್ನಾ​ಟಕ ಮೂಲದ ದಂಪತಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ‘‘ ಹಿಂದೂ ಸಂಪ್ರದಾಯದ ಪ್ರಕಾರ, ಮದುವೆಯಾದ ಬಳಿಕ ಮಹಿ​ಳೆ​ಯು ಪತಿಯ ಕುಟುಂಬದ ಅವಿ​ಭಾಜ್ಯ ಅಂಗವಾಗಿರುತ್ತಾಳೆ.

ಅಂಥ ಸ್ಥಾನದಲ್ಲಿರುವ ಆಕೆ ಪತಿಯ ಆದಾಯವನ್ನು ತಾನೊಬ್ಬಳೇ ಅನು​ಭವಿ​ಸಬೇಕೆಂಬ ಹಂಬಲದಿಂದ ಕುಟುಂಬವನ್ನು ಬೇರ್ಪಡಿಸುವುದು ಸರಿಯಲ್ಲ,'' ಎಂದು ನ್ಯಾಯಮೂರ್ತಿ​ಗಳಾದ ಅನಿಲ್‌ ಆರ್‌. ದವೆ ಮತ್ತು ಎಲ್‌. ನಾಗೇ​ಶ್ವರರಾವ್‌ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ. ಆ ಕಾರಣಕ್ಕಾಗಿ ಪತಿ​ಯನ್ನು ಆತನ ಪೋ ಷ​​ಕ​ರಿಂದ ಪ್ರತ್ಯೇಕಗೊಳಿಸಲು ಯತ್ನಿಸುವ ಪತ್ನಿಗೆ ವಿಚ್ಛೇದನ ನೀಡಬಹುದು ಎಂದು ಹೇಳಿದೆ. ‘‘ವಿವಾಹದ ಬಳಿಕ ಪತಿಯನ್ನು ತಂದೆ-ತಾಯಿ​ಯಿಂದ ಬೇರ್ಪಡಿ​ಸುವುದು ನಮ್ಮ ಸಂಸ್ಕೃತಿಗೆ ಹೊಂದಿಕೊಳ್ಳುವುದಿಲ್ಲ. ಮಗುವನ್ನು ಹೆತ್ತು, ಸಾಕಿ, ಸಲುಹಿ, ವಿದ್ಯಾ​ಭ್ಯಾಸ ಕೊಡಿಸಲು ಪೋಷಕರು ಸಾಕಷ್ಟುಶ್ರಮ ವಹಿಸಿರು​ತ್ತಾರೆ. ವಯಸ್ಸಾದ ಪೋಷಕರು ತಮ್ಮ ಖಚು​ರ್‍- ವೆಚ್ಚಗಳನ್ನು ಪುತ್ರ ನಿಭಾಯಿಸುತ್ತಾನೆ ಎಂಬ ನಂಬಿಕೆ ಇಟ್ಟಿರುತ್ತಾರೆ. ಹಾಗಾಗಿ, ಮದುವೆ​ಯಾದ ಬಳಿಕವೂ ವಯಸ್ಸಾದ ಪೋಷಕರನ್ನು ರಕ್ಷಣೆ ಮಾಡುವುದು ಮಗನ ನೈತಿಕ ಮತ್ತು ಕಾನೂನಾತ್ಮಕ ಹೊಣೆಗಾರಿಕೆ,'' ಎಂದು ನ್ಯಾಯಪೀಠ ಪ್ರತಿಪಾದಿಸಿದೆ.