ಕೋಮು ಪ್ರಚೋದಕ ಹೇಳಿಕೆ : ಧಾರ್ಮಿಕ ಮುಖಂಡನ ಬಂಧನಕ್ಕೆ ಆಗ್ರಹ

Hindu Organisations Leaders Complaint Against Tanveer Phir
Highlights

ರಂಜಾನ್ ಹಬ್ಬದಂದು ಮೌಲ್ವಿ ತನ್ವೀರ್ ಪೀರಾ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ವಿ ಹೆಚ್ ಪಿ, ಭಜರಂಗದಳ ಹಾಗು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೀರಾ ವಿರುದ್ಧ  ದೂರು ಸಲ್ಲಿಸಿದ್ದಾರೆ.

ವಿಜಯಪುರ : ರಂಜಾನ್ ಹಬ್ಬದಂದು ಮೌಲ್ವಿ ತನ್ವೀರ್ ಪೀರಾ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ವಿ ಹೆಚ್ ಪಿ, ಭಜರಂಗದಳ ಹಾಗು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೀರಾ ವಿರುದ್ಧ  ದೂರು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟಣ್ಣ ಅವರಿಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದೂರು ನೀಡಿದ್ದಾರೆ. 

ಇದೇ ಜೂನ್ 16 ರಂದು ಮೌಲ್ವಿ ತನ್ವೀರ್ ಪೀರಾ ಕೋಮುವಾದಿ, ಕೋಮುಪ್ರಚೋದಕವಾಗಿ  ವಿಜಯಪುರದ ದಖನಿ ಈದ್ಗಾ ಮೈದಾನದಲ್ಲಿ ಭಾಷಣ ಮಾಡಿದ್ದರು. ಅವರ ಹೇಳಿಕೆ ಸಂಬಂಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗೆ  ಸಿ.ಡಿ ಒದಗಿಸಿದ್ದಾರೆ. ಇನ್ನು ಕೆಲ ದಿನಗಳಲ್ಲೇ ಬಕ್ರೀದ್ ಹಬ್ಬ ಬರಲಿದೆ. ಅಂದು ಗೋವನ್ನು ಹತ್ಯೆಮಾಡುತ್ತೇವೆ. ಅದನ್ನು ತಡೆಯಲು ಯಾರಾದರೂ ಬಂದರೆ ಅವರನ್ನೂ ಕೂಡ ಬಲಿಕೊಡುತ್ತೇವೆಂದು ಹೇಳಿದ್ದರು. 

ಈ ಸಂಬಂಧ ಇದೀಗ ಮೌಲ್ವಿ ವಿರುದ್ದ ತಕ್ಷಣ ಪ್ರಕರಣ ದಾಖಲಿಸಿ, ಬಂಧಿಸಬೇಕೆಂದು ದೂರು ಸಲ್ಲಿಸಿದ್ದು, ಒಂದು ವೇಳೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. 

loader